ವಿಜಯಪುರ : ನಗರದಲ್ಲಿ ಸಾವರ್ಕರ್ ಫೋಟೋ ವಿವಾದ ತಾರಕ್ಕೇರಿದ್ದು, ತಡರಾತ್ರಿ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿ ಅಪರಿಚಿತರು ಪರಾರಿಯಾಗಿರುವ ಘಟನೆ ನಡೆದಿದೆ.
ವಿಜಯಪುರದ ಜಲನಗರದ ಕಾಲೋನಿಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಅಪರಿಚಿತರು ತಡರಾತ್ರಿ ಕಾಂಗ್ರೆಸ್ ಕಚೇರಿಯ ಪ್ರವೇಶದ್ವಾರ ಹಾಗೂ ಕಿಟಕಿಗಳಿಗೆ ಸಾವರ್ಕರ್ ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಂಗ್ರೆಸ್ ಕಚೇರಿಯಲ್ಲಿ ಅಂಟಿಸಿದ್ದ ಸಾವರ್ಕರ್ ಫೋಟೋ ತೆರವುಗೊಳಿಸಿದ್ದಾರೆ.