ಬೆಂಗಳೂರು:ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸತೀಶ್ ಜಾರಕಿಹೊಳಿ ಬಾಯಿ ಚಪಲಕ್ಕೆ ಮಾತನಾಡ್ತಾರೆ ಅಷ್ಟೇ. ಸರ್ವರ್ ಸ್ಟ್ರಾಂಗ್ ಮಾಡಿಕೊಳ್ಳಬೇಕೆಂದು ಇವರಿಗೆ ಗೊತ್ತಿಲ್ವಾ? ಕೇಂದ್ರ 5 ಕೆಜಿ ಅಕ್ಕಿ ಕೊಡುತ್ತಿದೆ, ಈ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. 35 ಲಕ್ಷ ಬಿಲ್ ಕಟ್ಟಬೇಕೆಂದು VTU ವಿಸಿ ಬಾಯಿ ಬಡ್ಕೊತ್ತಿದ್ದಾರೆ.
ಕೋಲಾರದಲ್ಲಿರುವ ಡಿಸಿಸಿ ಬ್ಯಾಂಕ್ನಲ್ಲಿ ಗಲಾಟೆ ಆಗಿದೆ. ತನಿಖೆ ನಡೆದರೆ ಯಾರ ಯಾರು ಜೈಲಿಗೆ ಹೋಗುತ್ತಾರೆ ಗೊತ್ತಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಸಂಪುಟ ತೀರ್ಮಾನಕ್ಕೆ ಸಂಬಂಧಿಸಿದಂತೆ ಮಕ್ಕಳ ಬದುಕಿನ ಜೊತೆಗೆ 2 ಪಕ್ಷದವರು ಚೆಲ್ಲಾಟ ಆಡುತ್ತಿದ್ದಾರೆ. ಯಾರ ಬಗ್ಗೆ ಓದಬೇಕು ಅನ್ನುವ ಗೊಂದಲ ಮಕ್ಕಳಲ್ಲಿ ಇದೆ. ಮಕ್ಕಳ ಮನಸ್ಸಲ್ಲಿ ಇಂತಹ ವಾತಾವರಣ ನಿರ್ಮಾಣ ಸರಿಯಲ್ಲ ಎಂದು ಕಿಡಿಕಾರಿದ್ದಾರೆ