ಬೆಳಗಾವಿ ಅರಣ್ಯ ವೃತ್ತದಿಂದ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ಸಸಿ ನಡುವ ಸಪ್ತಹ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ವನ್ನು ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ 26 ವಿಶ್ವೇಶ್ವರ ನಗರದಲ್ಲಿ ಇಂದು ಸಸಿ ನಡುವ ಸಪ್ತಾಹ ಚಾಲನೆ ನೀಡಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೆಟ್ ನಾವು ಜನರ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಸಸಿ ಬೆಳಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸರ್ಕಾರ 5 ಕೋಟಿ ಸಸಿ ನೆಡುವ ಗುರಿ ಹೊಂದಿದೆ
ಎಂದು ಸುದ್ದಿಗಾರಿಗೆ ಮಾಹಿತಿ ನೀಡಿದರು,
ಬೆಳಗಾವಿ ಅರಣ್ಯ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್ ಚವಾನ್ ಅವರು ಇಲಾಖೆ ವತಿಯಿಂದ ಸಸಿ ನೀಡುವ ಸಪ್ತಹ ಕಾರ್ಯಕ್ರಮ ಇಂದಿನ ಪ್ರಾರಂಭ ಮಾಡಿದ್ದೇವೆ ಜುಲೈ 1 ರಿಂದ ಜುಲೈ 7 2023ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳು ಜನರ ಸಹಭಾಗಿತ್ವದೊಂದಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಸಹಭಾಗಿತ್ವದೊಂದಿಗೆ
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
ಗ್ರಾಮ ಪಂಚಾಯಿತಿ, ಹಾಗೂ ಸಂಘ ಸಂಸ್ಥೆಗಳು, ರಸ್ತೆ, ಬದಿಗಳಲ್ಲಿ ಶಾಲೆಗಳಲ್ಲಿ ಸಸಿಗಳನ್ನು ನೋಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಬೆಳಗಾವಿ ಅರಣ್ಯ ಪ್ರಾದೇಶಿಕ ವಿಭಾಗ ಸಾಮಾಜಿಕ ವಿಭಾಗ ಹಾಗೂ ಬೆಳಗಾವಿ ವೃತ್ತದಲ್ಲಿ ೧೪ರಿಂದ 15 ಲಕ್ಷದವರೆಗೆ ಸಸಿಗಳನ್ನು ನೆಡುವ ಗುರಿ ಹೊಂದಿದೆ ಅಲ್ಲದೆ ಅರಣ್ಯ ಇಲಾಖೆಯಿಂದ ರೈತರಿಗೆ ಕೃಷಿ ಪ್ರೋತ್ಸಾಹ ಯೋಜನೆ ಇಂದ ಪ್ರತಿ ವರ್ಷ ರೈತರಿಗೆ ಸಸಿ ನೀಡುತ್ತಾ ಇದ್ದೇವೆ .
ಜನರ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆ ಮಹತ್ವವನ್ನು ಸಾರುವ ಇದರ ಜೊತೆಗೆ ಕಾರ್ಯಕ್ರಮವನ್ನು ರೂಪಿಸಲಾಗಿದೆ ಕಳೆದ ತಿಂಗಳ ಅರಣ್ಯ ಇಲಾಖೆಗೆ ಹೊಸದಾಗಿ ಲಾಂಛನ ವನ್ನು ನೀಡಲಾಗಿದೆ ಈ ಲಾಂಛನ ಸಂಪೂರ್ಣ ಅರಣ್ಯದ ಸಂಪತ್ತು ಹಾಗೂ ಸಮೃದ್ಧಿಯನ್ನು ಹೊಂದಿದೆ ಎಂದು ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮಂಜುನಾಥ್ ಚೌಹಾಣ ಸುದ್ದಿಗಾರರಿಗೆ ರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕರಾದ ಶಂಕರ್ ಕಲ್ಲೋಳ್ಕರ್, ಬೆಳಗಾವಿಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಪ್ರಶಾಂತ್ ಪಿಕೆ ಎಸ್, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ನಾಯಕವಾಡಿ, ಎ ಸಿ ಎಫ್ ಹಬ್ಬರ್ಗಿ, RF0 ಪುರುಷೋತ್ತಮ್, ಉಪ ವಲಯ ಅರಣ್ಯ ಅಧಿಕಾರಿಗಳಾದ ರಮೇಶ್ ಗಿರಪ್ನವರ್,
ಸುಭಾಷ್ ಶೇರ್ಖಾನಿ, ಅರಣ್ಯ ರಕ್ಷಕರು ಸಿಬ್ಬಂದಿ ವರ್ಗ ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು