ಬೆಳಗಾವಿ: ಸ್ವಾತಂತ್ರ್ಯ ಹೋರಾಟದಲ್ಲಿ ಒಗ್ಗಟ್ಟಿನ ಪ್ರತೀಕವಾಗಿ ಬಾಲಗಂಗಾಧರ ತಿಲಕರವರು ಪ್ರಾರಂಭಿಸಿದ ಗಣೇಶ ಚತುರ್ಥಿ ಧಾರ್ಮಿಕ ಆಚರಣೆಯೊಂದಿಗೆ ರಾಷ್ಟ್ರೀಯತೆ ಹಾಗೂ ಸ್ವಾತಂತ್ರ್ಯ ಕಿಚ್ಚು ಹೆಚ್ಚಿಸಿದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಒಂದು ಮೌಲ್ಯಾಧಾರಿತ ದೊಡ್ಡ ಧಾರ್ಮಿಕ ಆಚರಣೆಯಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್, ಕಿತ್ತೂರು ರಾಣಿ ಚೆನ್ನಮ್ಮ, ಅಮಟೂರ ಬಾಳಪ್ಪ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ, ಬಾಲಗಂಗಾಧರ ತಿಲಕ, ಸರ್ದಾರ ವಲ್ಲಭಾಯಿ ಪಟೇಲ್ ಇನ್ನು ಅನೇಕರ ಭಾವಚಿತ್ರಗಳನ್ನು ಹಾಕುವವರನ್ನು ಬಿಜೆಪಿ ಸ್ವಾಗತಿಸಲಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನು ಗೌರವಿಸುವ ಕೆಲಸ ಬಿಜೆಪಿ ಮಾಡಲಿದೆ.
ಆದರೆ ಮತಾಂತರ ಮಾಡಿದ ಹಾಗೂ ಹಿಂದೂ ದೇವಾಲಯ ಕೊಳ್ಳೆ ಹೊಡೆದವರು, ಹಿಂದೂ ಸಮಾಜದ ಮೇಲೆ ಕ್ರೌರ್ಯ ನಡೆಸಿದವರನ್ನು ಬಿಟ್ಟು ಎಲ್ಲರ ಭಾವಚಿತ್ರಕ್ಕೆ ಬಿಜೆಪಿ ಸ್ವಾಗತ ಮಾಡಲಿದೆ.
ಈ ವಿಚಾರದಲ್ಲಿ ಕೆಲ ಬಿಜೆಪಿ ವಿರೋಧಿಗಳು ಬಿಟ್ಟಿ ಪ್ರಚಾರ ತಗೆದುಕೊಳ್ಳುತ್ತಿರುವವರು ವಿರೋಧ ನಡೆಸುವವರು ವೀರ ಸಾವರ್ಕರ್ ಬಗ್ಗೆ ತಿಳಿದುಕೊಳ್ಳಲಿ ಅವರ ಇತಿಹಾಸ ಓದಲಿ ಎಂದು ಕಿಡಿಕಾರಿದ್ದಾರೆ.