spot_img
22.9 C
Belagavi
Saturday, December 3, 2022
spot_img

ಮೋದಿ ಆಡಳಿತದಲ್ಲಿ ಭಾರತವನ್ನು ಜಗದ್ಗುರುವನ್ನಾಗಿಸಿದೆ : ಸಂಜಯ್ ಪಾಟೀಲ್

ಬೆಳಗಾವಿ: ನರೇಂದ್ರ ಮೋದಿಯವರ ಅಡಳಿತದಿಂದ ಭಾರತ ಜಾಗತಿಕ ಶಕ್ತಿಯಾಗಿ ಬದಲಾಗುತ್ತಿದ್ದು ಪ್ರಪಂಚ ತುಂಬೆಲ್ಲ ಬೆಳಕು ಚೆಲ್ಲುವಂತಾಗಿದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಮಹಾನಗರದ ಗೋಮಟೆಶ್ವರ ವಿದ್ಯಾ ಪೀಠದಲ್ಲಿ ಬುಧವಾರ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವನ, ದೂರದೃಷ್ಟಿ, ಯೋಜನೆಗಳು ಹಾಗೂ ಸಾಧನೆಗಳ ಬೌದ್ಧಿಕ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ದೇಶದ ಭದ್ರತೆಯಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಗ್ರಸ್ಥಾನಕ್ಕೆ ತಂದು ನಿಲ್ಲಿಸಿದ ಕೀರ್ತಿ ರಾಷ್ರ ಕಂಡ ಧಿಮಂತ ನಾಯಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.

24 ಸಾವಿರ ಕೋಟಿ ರೂಪಾಯಿಗಳಲ್ಲಿ ಸ್ವದೇಶಿ ನಿರ್ಮಿತ ಐ ಎನ್ ಎಸ್ ವಿಕ್ರಾಂತ ಯುದ್ದ ನೌಕೆಯನ್ನು ದೇಶಕ್ಕೆ ಲೋಕಾರ್ಪಣೆ ಮಾಡುವ ಮೂಲಕ ಚೀನಾ ದೇಶಕ್ಕೆ ರಕ್ಷಣಾ ಕ್ಷೇತ್ರದಲ್ಲಿ ಸೆಡ್ಡು ಹೊಡೆಯುವ ಮೂಲಕ ಆ ದೇಶದ ಕುತಂತ್ರಿಗಳ ಬಾಯಿ ಮುಚ್ಚಿಸಿದ್ದಾರೆ.

ಇರಾನ್ ದೇಶದ ಚಾಹಾಬಾರ ಬಂದರ್ ಅಭಿವೃದ್ಧಿಮಾಡುವ ಮೂಲಕ ಪಾಕಿಸ್ಥಾನದ ಎಲ್ಲ ಮಾರ್ಗಗಳನ್ನು ಬಿಟ್ಟು ವಿದೇಶಿಕ್ಕೆ ಸರಕು ಸಾಗಾಣಿಕೆ ಪ್ರಾರಂಭ .ಅಡುವ ಮೂಲಕ ಪಾಕಿಸ್ಥಾನಕ್ಕೆ ಮರ್ಮಾಘಾತ ನೀಡಿದ ಮೋದಿಯವರ ಯೋಜನೆಗಳು ಶ್ಲಾಘನೀಯ.

ಪ್ರಪಂಚವನ್ನು ಕಾಡುತ್ತಿರುವ ಕರೋನಾ ಲಸಿಕೆಯಮ್ನು ಪ್ರಪಂಚದಲ್ಲಿ ಉಚಿತವಾಗಿ ಮೂರನೆ ಡೋಜ್ ನೀಡುವ ಮೂಲಕ ದೇಶದ 134 ಕೋಟಿ ಜನಸಂಖ್ಯೆಗೆ 200 ಕೋಟಿಗಿಂತ ಅಧಿಕ ಡೋಜ್ ನೀಡುವ ಮೂಲಕ ಪ್ರಪಂಚದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ವಿದೇಶಿಗರ ದೃಷ್ಟಿಯಲ್ಲಿ ಭಾರತದ ಬಗ್ಗೆ ಇದ್ದ ಅಸಡ್ಡೆಯನ್ನು ಕಳೆದ 8ವರ್ಷಗಳ ಮೋದಿಜಿಯವರ ಆಡಳಿತದಲ್ಲಿ ಅಳಿಸಿ ಹಾಕಿ ಭಾರತವನ್ನು ಜಗದ್ಗುರುವನ್ನಾಗಿಸಿದ್ದಾರೆ.

ಪ್ರಪಂಚವೆ ಭಾರತದ ಯೋಗ, ಆಯುರ್ವೇದ ವಿದೇಶಿ ನೀತಿಗಳನ್ನು ಒಪ್ಪಿಕೊಳ್ಳುವ ಮೂಲಕ ಪ್ರಪಂಚಕ್ಕೆ ಗುರುವಿನ ಸ್ಥಾನದಲ್ಲಿದೆ. ರಷ್ಯಾ ಉಕ್ರೇನ್ ಯುದ್ದದಲ್ಲಿ ಸಿಕ್ಕುಹಾಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲು ಮೊದಿಯವರ ಒಂದು ಪೊನ್ ಕರೆಗೆ 6 ಘಂಟೆಗಳ ಕಾಲ ಯುದ್ದ ನಿಲ್ಲಿಸಿ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದು ಪ್ರಪಂಚದ ಅಗ್ರ ನಾಯಕ ಮೋದಿ ಎಂಬುದನ್ನು ಸಾಬಿತು ಮಾಡಿದರು.

ಕಡು ಬಡತನದಲ್ಲಿ ಜನಿಸಿದ ಮೋದಿಜಿ ಕಳೆದ ಇಪ್ಪತ್ತು ವರ್ಷಗಳಿಂದ ಅಧಿಕಾರದಲ್ಲಿದ್ದು ಅವರ ಯೋಜನಾ ಬದ್ದ ಕಾರ್ಯಕ್ರಮಗಳು ಜಗತ್ತಿನಾದ್ಯಂತ ಪ್ರಸಿದ್ದಿ ಪಡೆಯುತಿವೆ.

ಸ್ವಾತಂತ್ರ ಭಾರತ ಅಮೃತ ಮಹೋತ್ಸವದ ಸಮಯದಲ್ಲಿ ಮೋದಿಜಿಯಂತಹ ಅಗ್ರಗಣ್ಯ ನಾಯಕ ಭಾರತೀಯರಿಗೆ ಸಿಕ್ಕಿದ್ದು ನಮ್ಮೆಲ್ಲರ ಹೆಮ್ಮೆ. ದೇಶವೆ ನನ್ನ ಮನೆ ದೇಶವಾಸಿಗಳೆ ನನ್ನ ಕುಟುಂಬ ಎಂದು ತಿಳಿದು ದಿನದ 18 ಘಂಟೆ ಕೆಲಸ ಮಾಡುವ ಧಿಮಂತ ನಾಯಕನ ಬಗ್ಗೆ ಪಕ್ಷಾತೀತವಾಗಿ ಅಭಿನಂದನೆ ತಿಳಿಸೊಣ ಎಂದರು.

 

ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ನೀತಿನ ಚೌಗಲೆ ಸ್ವಾಗತಿಸಿದರು. ಕಾರ್ಯಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜಾರ ನಿರೂಪಿಸಿದರು. ಎಸ್ಸಿ ಮೊರ್ಚಾ ಜಿಲ್ಲಾ ಅಧ್ಯಕ್ಷ ಯಲ್ಲೇಶ್ ಕೊಲಕಾರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವೈದ್ಯಕೀಯ ಪ್ರಕಷ್ಟಾದ ಡಾ.ಗುರು ಕೋತಿನ, ಅಭಯ ಅವಲಕ್ಕಿ ಸಂತೋಷ ದೇಶನೂರ,ಅರುಣ ಕೋಲಕಾರ, ರಾಜೇಶ್ ಪಾಟೀಲ, ರಾಹುಲ ವಾಘ್ಮೂರೆ, ಚಂದ್ರಕಾಂತ ಕೊಲಕಾರ ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕರ್ತರು ಇದ್ದರು.

Related News

50 ಲಕ್ಷ ರೂ,ಗಳ ವೆಚ್ಚದಲ್ಲಿ ಮಂಡೋಳಿ ಗ್ರಾಮದ ರಸ್ತೆಗಳ ಅಭಿವೃದ್ಧಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಗಣಿ ನಿಧಿಯ ವತಿಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು 50 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿದ್ದು, ಶನಿವಾರ...

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಯೋಜನೆಗಳ ಸರಣಿ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 60 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶನಿವಾರ ಕಾಂಕ್ರೀಟ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -