spot_img
spot_img
spot_img
24.8 C
Belagavi
Thursday, June 1, 2023
spot_img

ಸಂಭಾಜಿ ಮಹಾರಾಜ ವೃತ್ತ ಕಾಮಗಾರಿ ಚುರುಕು : ಶಾಸಕ ಅನಿಲ ಬೆನಕೆ ಭೇಟಿ ಪರಿಶೀಲನೆ :

ಬೆಳಗಾವಿ : ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಕಾರ್ಯವು ತಜ್ಞರ ಮಾರ್ಗದರ್ಶನದಲ್ಲಿ ಯುದ್ದೋಪಾಡಿಯಲ್ಲಿ ನಿರ್ಮಾಣ ಕಾಮಗಾರಿಯು ನಡೆಯುತ್ತಿದ್ದು, ಶಾಸಕ ಅನಿಲ ಬೆನಕೆರವರು ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು ಬೆಳಗಾವಿಯಲ್ಲಿನ ಎಲ್ಲ ವೃತ್ತಗಳನ್ನು ಅಭಿವೃಧ್ದಿ ಪಡಿಸಲಾಗುತ್ತಿದೆ. ಅದೇ ರೀತಿ ಸಂಭಾಜಿ ವೃತ್ತವನ್ನೂ ಸೌಂದರ್ಯಿಕರಣ ಮಾಡಲಾಗುತ್ತಿದೆ. ಸಂಭಾಜಿ ಮಹಾರಾಜರು ಈ ಪ್ರದೇಶಕ್ಕೆ ಭೇಟಿ ನೀಡಿದ ಐತಿಹಾಸಿಕ ದಾಖಲೆಗಳಿವೆ.

ಛತ್ರಪತಿ ಸಂಭಾಜಿ ಮಹಾರಾಜರ ಸ್ಮಾರಕವನ್ನು ಆಧುನಿಕ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರವೇ ಇದನ್ನು ಲೋಕಾರ್ಪಣೆ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.

ಉತ್ತಮ ಗುಣಮಟ್ಟದ ಕುಶಲಕರ್ಮಿಗಳು ಈ ಕೆಲಸವನ್ನು ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಕಾಮಗಾರಿಗೆ ಹಣ ಮಂಜೂರು ಮಾಡಲು ಶಾಸಕ ಅನಿಲ ಬೆನಕೆ ಅವರು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಹರ್ಷ ವಕ್ತಪಡಿಸಿದರು.

ಈ ಸಂದರ್ಭದಲ್ಲಿ ಈ ವೇಳೆ ಸಂಭಾಜಿ ಮಹಾರಾಜರ ಸ್ಮಾರಕ ಸಂದರ್ಯಿಕರಣ ಸಮಿತಿ ಅಧ್ಯಕ್ಷ ಸುನೀಲ ಜಾಧವ, ಮರಾಠಾ ಸಮಾಜದ ಮುಖಂಡ ಗುಣವಂತ ಪಾಟೀಲ, ಲೋಕಮಾನ್ಯ ತಿಲಕ ಗಣೇಶ ಮಂಡಳಿ ಅಧ್ಯಕ್ಷ ವಿಜಯ ಜಾಧವ, ಶಿವಸೇನೆ ಮುಖಂಡ ಬಂಡು ಕೇರವಾಡಕರ, ನಗರಸೇವಕ ಜಯತೀರ್ಥ ಸವದತ್ತಿ, ಪ್ರವೀಣ ಪಾಟೀಲ, ಶಿವಪ್ರಸಾದ ಮೋರೆ, ಆದಿತ್ಯಾ ಪಾಟೀಲ, ಶೀನಾಥ ಪವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Related News

ಶೆಟ್ಟರ್​, ಲಕ್ಷ್ಮಣ್ ಸವದಿ ನಮ್ಮ ನಾಯಕರು ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ

ಬೆಳಗಾವಿ: ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು...

ರಾಜ್ಯದ ವಿವಿದೆಡೆ ಲೋಕಾಯುಕ್ತ ದಾಳಿ

ಬೆಂಗಳೂರು:  ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮೇ 31) ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಮತ್ತೊಂದೆಡೆ ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ ತುಮಕೂರಿನ ಕೆಐಎಡಿಬಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -