spot_img
spot_img
spot_img
28.1 C
Belagavi
Thursday, September 29, 2022
spot_img

ವೇತನ ಪರಿಷ್ಕರಣೆ : 2 ಲಕ್ಷ ದಾಟಿದ ಶಾಸಕರ ಸಂಬಳ 

spot_img

ಬೆಂಗಳೂರು: ಶಾಸಕರ ವೇತನ/ಭತ್ಯೆಗಳ ಮೊತ್ತವನ್ನು ಹೆಚ್ಚಿಸಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್​ನಿಂದ ಶಾಸಕರ ವೇತನದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶಾಸಕರಿಗೆ ತಿಂಗಳ ವೇತನ/ಭತ್ಯೆಗಳು 2,05,000 ರೂಪಾಯಿ ದಾಟಿದೆ.

ಈ ಪೈಕಿ ವೇತನ 40 ಸಾವಿರ, ಕ್ಷೇತ್ರ ಭತ್ಯೆ 60 ಸಾವಿರ, ಪ್ರಯಾಣ ಭತ್ಯೆ 60 ಸಾವಿರ, ಆಪ್ತ ಸಹಾಯಕರು ಮತ್ತು ಕೊಠಡಿ ಸೇವಕರ ಭತ್ಯೆ 20 ಸಾವಿರ, ದೂರವಾಣಿ ಭತ್ಯೆ 20 ಸಾವಿರ ರೂ, ಅಂಚೆ ವೆಚ್ಚ 5 ಸಾವಿರ ರೂಪಾಯಿ ಆಗಿದೆ.

ಈ ಮೊದಲು ಶಾಸಕರು ಪಡೆಯುತ್ತಿದ್ದ ವೇತನ / ಭತ್ಯೆಗಳಿಗೆ ಹೋಲಿಸಿದರೆ ಪರಿಷ್ಕೃತ ಮೊತ್ತದಿಂದ ಶೇ 50ರಷ್ಟು ಏರಿಕೆ ಆಗಿದೆ. ಏಪ್ರಿಲ್ 1, 2022ರಿಂದ ಪರಿಷ್ಕೃತ ವೇತನವನ್ನು ಶಾಸಕರು ಪಡೆಯುತ್ತಿದ್ದಾರೆ. ಸಂಕಷ್ಟದ ನಡುವೆಯೂ ಶಾಸಕರ ವೇತನ ಹೆಚ್ಚಳ ಆಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಕಾರಣವಾಗಿದೆ.

 

spot_img

Related News

ಗಂಟುರೋಗದಿಂದ ದನಗಳು ಮೃತಪಟ್ಟರೆ 20 ಸಾವಿರ ರೂ.ಗಳ ಪರಿಹಾರ : ಸಿಎಂ ಬೊಮ್ಮಾಯಿ 

ಹಾವೇರಿ : ಗಂಟುರೋಗದಿಂದ ದನಗಳು ಮೃತಪಟ್ಟರೆ 20 ಸಾವಿರ ರೂಪಾಯಿಗಳ ಪರಿಹಾರ ಒದಗಿಸಲಾಗುವುದು ಹಾಗೂ ಗಂಟು ರೋಗದ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು ಹಾವೇರಿಯ ಗುರುಭವನದಲ್ಲಿ ಹಾವೇರಿ...

ಮೋದಿ ಅವರ ನೇತೃತ್ವದಲ್ಲಿ 150 ಸ್ಥಾನಗಳ ಗೆಲುವ ಪಣ : ಯಡಿಯೂರಪ್ಪ 

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -