ಕ್ರೆಡಿಟ್ ಸೊಸೈಟಿಗಳು ಆರ್ಥಿಕತೆಯ ಬಲಪಡಿಸುವಂತೆ ಮಹತ್ ಪೂರ್ಣ ಕೆಲಸ ಮಾಡುತ್ತಿದ್ದರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಇದೆವೆ ಇವುಗಳ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಮಾಧ್ಯಮ ದಿಂದ ಸಿಗಬಹುದಾದ ಪತ್ತಿನ ಸಂಘಗಳ ಸಮಸ್ಯೆಗಳನ್ನು ಸಂಘಟಿತ ರೂಪದಲ್ಲಿ ಪ್ರಸ್ತುತ ಪಡಿಸುವುದಕ್ಕಾಗಿ ಇದೇ ಡಿಸೆಂಬರ್ 2 ಮತ್ತು 3 ರಂದು ನವ ದೆಹಲಿಯಲ್ಲಿ ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನ ಆಯೋಜನೆ ಮಾಡಲಾಗಿದೆ .
ಎಲ್ಲಾ ರಾಜ್ಯಗಳಿಂದ 10,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಪತ್ತಿನ ಸಂಘಗಳು ಹಾಗೂ ಕೋ ಆಪರೇಟಿವ್ ಕ್ರೆಡಿಟ ಸೊಸೈಟಿಗಳು ಎದುರಿಸುತ್ತಿರುವ ಸಮಸ್ಯೆಗಳ ಕೇಂದ್ರ ಸರ್ಕಾರದ ಗಮನ ಸೆಳೆಯಲು
ಈ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಕೇಂದ್ರೀಯ ಗೃಹ ಮತ್ತು ಸಹಕಾರ ಮಂತ್ರಿಗಳಾದ ಅಮಿತ್ ಶಾ ಅವರನ್ನು ಈ ಅಧಿವೇಶನಕ್ಕೆ ಮಾರ್ಗದರ್ಶನ ನೀಡುವುದಕ್ಕಾಗಿ ಆಹ್ವಾನಿಸಲಾಗಿದೆ.
ಈ ಅಧಿವೇಶನದಲ್ಲಿ ಪತ್ತಿನ ಸಂಘಗಳು ಕ್ರೆಡಿಟ್ ಸೊಸೈಟಿಗಳು ಸಮಸ್ಯೆಗಳಿಗೆ ಪರಿಹಾರ ಪಡೆಯುವುದಕ್ಕಾಗಿ ವಿಭಿನ್ನವಾದ ಪ್ರಸ್ತಾಪಗಳನ್ನು ಮಂಜೂರು ಮಾಡಲಾಗುತ್ತದೆ “ಚಲೋ ದಿಲ್ಲಿ ” ಈ ಬೃಹತ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಸಹಕಾರ ಪತ್ತಿನ ಸಂಘಗಳು ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗಳು ಹಾಗೂ ಸೌಹಾರ್ದ ಸಹಕಾರಿ ಸಂಘಗಳು ಪದಾಧಿಕಾರಿಗಳು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ನಿರ್ದೇಶಕರು ರಾಷ್ಟ್ರೀಯ ಸಂಯೋಜಕರಾದ
ಸಂಜಯ್ ಹೊಸಮಠ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಈ ಸಂದರ್ಭದಲ್ಲಿ ಜಗದೀಶ್ ಕವಟಿಗಿಮಠ ನಿರ್ದೇಶಕರು ಕ.ರಾ.ಸೌ.ಸ. ಸಹಕಾರಿ ನಿ… ಬೆಂಗಳೂರು
ತಮ್ಮನ್ನ ಬಾಲಪ್ಪ ಕೆಂಚರಡ್ಡಿ ನಿರ್ದೇಶಕರು ಕ. ರಾ. ಸ ಪತ್ತಿನ. ಸ .ಮಹಾಮಂಡಳಿ ನಿ… ಬೆಂಗಳೂರು
ಸುಧಾಕರ್ ಮಹೇಂದ್ರ ಸಹಕಾರ ಭಾರತಿ ಜಿಲ್ಲಾ ಘಟಕ ಬೆಳಗಾವಿ