ಬೆಳಗಾವಿ : ಕೊರೊನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಇಲಾಖೆ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿರುವ ಕೊರೊನಾ ವಾರಿಯಸ೯ಗಳನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ಕೊರೊನಾ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಕೊರೊನಾ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿರುವುದಂತು ನಿಯಂತ್ರಿಸಲು ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿ ಸರ್ಕಾರ ವಿವಿಧ ಆದೇಶಗಳ ಮೂಲಕ ವೈದ್ಯರು ತಜ್ಞರು ಆರೋಗ್ಯ ನಿರೀಕ್ಷಕರುರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು.
ಆದರೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರೋನ ವಾರಿಯಸ೯ ಕೆಲಸ ಮಾಡಿರುವ ನಮ್ಮನ್ನು ಸೇವೆಯಲ್ಲಿ ಕಾಯಂಗೊಳಿಸಬೇಕೆಂದು, ಹೆಚ್ಚುವರಿ ಭತ್ತೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದ ಜಿಲ್ಲಾ ಅಧ್ಯಕ್ಷರಾದ ಸೋಮ ಗುಡಿಸಲ ಮನೆ, ಉಪ ಜಿಲ್ಲಾ ಅಧ್ಯಕ್ಷರು ಪ್ರಮೋದ್ ಕಾಂಬಳೆ ,ಸುಕನ್ಯಾ ಕಾಂಬಳೆ ,ವಿಶ್ವನಾಥ್ ಗಿರಿ ಜನವರ್ ಮತ್ತಿತರರು ಉಪಸ್ಥಿತರಿದ್ದರು.