spot_img
spot_img
spot_img
28.1 C
Belagavi
Thursday, September 29, 2022
spot_img

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದಲ್ಲೂ ಪುನರಾವರ್ತನೆ : ಸಿ.ಟಿ. ರವಿ ವಿಶ್ವಾಸ

spot_img

ಬೆಂಗಳೂರು: ಪಂಚರಾಜ್ಯ ಚುನಾವಣೆಯ ಮಾದರಿಯಲ್ಲಿ ಫಲಿತಾಂಶವು ಕರ್ನಾಟಕದಲ್ಲೂ ಬರಲಿದೆ 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತೇ ಅಧಿಕಾರಕ್ಕೆ ಏರುವುದು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಅವರು ನುಡಿದರು.

ನಗರದ ವಿಧಾನಸೌಧದ ಬಿಜೆಪಿ ಕಛೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ಮತ್ತಿತರ ರಾಜ್ಯಗಳಲ್ಲಿ ಬಂದ ಫಲಿತಾಂಶ ರಾಜ್ಯದಲ್ಲೂ ಪುನರಾವರ್ತನೆ ಆಗಲಿದೆ ಎಂಬುದನ್ನು ಕಾಂಗ್ರೆಸ್ ನವರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಒಡೆದಾಳುವ, ಮತೀಯವಾದದ, ಅಭಿವೃದ್ಧಿಹೀನ ರಾಜಕೀಯ ನಡೆಯುವುದಿಲ್ಲ. ಕರ್ನಾಟಕದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕರ್ನಾಟಕದ ಜನ ಯಾವಾಗಲೂ ರಾಷ್ಟ್ರ ಹಿತದ ಪರವಾಗಿ ಮತ ಹಾಕಿದ್ದಾರೆ ಎಂದು ತಿಳಿಸಿದರು.

4 ರಾಜ್ಯಗಳಲ್ಲಿ ಸಿಕ್ಕಿದ ಗೆಲುವು ಆಡಳಿತಪರ ಅಲೆಗೆ ಸಿಕ್ಕಿದ ಜನಮತ. ಅಭಿವೃದ್ಧಿ ಆಧರಿತ, ಜನಸ್ನೇಹಿ, ರಾಷ್ಟ್ರಹಿತದ ರಾಜಕಾರಣಕ್ಕೆ ಮತ ಲಭಿಸಿದೆ. ಜಾತಿ ಆಧರಿತ ರಾಜಕೀಯ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಗೆಲುವು ಖಚಿತ ಎಂಬ ಕಾಲ ಈಗ ಇಲ್ಲ ಎಂದು ಅವರು ತಿಳಿಸಿದರು.

ಗೋವಾ ಚುನಾವಣೆ ಫಲಿತಾಂಶ ಬರುವ ಮೊದಲೇ ಕೆಲವರು ಕರ್ನಾಟಕದಿಂದ ವಿಶೇಷ ವಿಮಾನದಲ್ಲಿ ತೆರಳಿದರು. ಫಲಿತಾಂಶಕ್ಕೂ ಮೊದಲು ಕಾಂಗ್ರೆಸ್‍ನವರು ಸರಕಾರ ರಚನೆ ಸಂಬಂಧ ರಾಜ್ಯಪಾಲರ ಸಮಯ ನಿಗದಿಪಡಿಸಿದ್ದರು. ಬಂದ ದಾರಿಗೆ ಸುಂಕ ಇಲ್ಲದೇ ಹಿಂತಿರುಗಬೇಕಾಯಿತು ಎಂದರು.

ಕಾಂಗ್ರೆಸ್ ಅಭಿವೃದ್ಧಿಯೂ ಇಲ್ಲದ ನೀತಿರಹಿತ ರಾಜಕಾರಣ ಮಾಡುತ್ತಿದೆ. ಕುಟುಂಬದ ನೆಲೆಯಿಂದ ಹೊರಗೆ ನಾಯಕತ್ವಕ್ಕೆ ನೆಲೆ ಒದಗಿಸಲಾಗದ ಸ್ಥಿತಿಯನ್ನು ಅದು ತಲುಪಿದೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿದೆ ಎಂದು ಅವರು ತಿಳಿಸಿದರು.ಪಂಜಾಬ್ ನಲ್ಲಿ ಕಾಂಗ್ರೆಸ್ ಆಡಳಿತ ಇತ್ತು. ಅಲ್ಲಿ ಆಡಳಿತ ವಿರೋಧಿ ಫಲಿತಾಂಶ ಬಂದರೆ, 4 ರಾಜ್ಯಗಳಲ್ಲಿ ಆಡಳಿತ ಪರ ಫಲಿತಾಂಶ ಬಂದಿದೆ. ಇದು ಗಮನಿಸಬೇಕಾದ ಅಂಶ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ ವಿಸರ್ಜಿಸಲು ಮಹಾತ್ಮ ಗಾಂಧಿಯವರು ಸಲಹೆ ಕೊಟ್ಟಿದ್ದರು. ಆ ಕೆಲಸವನ್ನು ಒಂದೊಂದೇ ರಾಜ್ಯದಲ್ಲಿ ಜನರು ಸಾಕಾರಗೊಳಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜನಮನ ಗೆದ್ದಿರುವುದಕ್ಕೆ ಮಣಿಪುರದ ಗೆಲುವು ನಿದರ್ಶನವಾಗಿದೆ. ಗೋವಾದಲ್ಲಿ ಮೂರನೇ ಬಾರಿಗೆ ಗೆದ್ದಿರುವುದು ಒಂದು ಐತಿಹಾಸಿಕ ದಾಖಲೆಯಾಗಿದೆ. ಇದು ರಾಷ್ಟ್ರವಾದ, ಸ್ಥಿರ ಸರಕಾರಕ್ಕೆ ಜನರ ಬಳುವಳಿ ಎಂದು ತಿಳಿಸಿದರು.

ಒಂದು ದೇಶ ಒಂದು ಚುನಾವಣೆಯು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅನುμÁ್ಠನಕ್ಕೆ ಬರಬೇಕು. 5 ವರ್ಷಗಳ ಕಾಲ ಅಲ್ಲಲ್ಲಿ ಚುನಾವಣೆ ಅಭಿವೃದ್ಧಿ ದೃಷ್ಟಿಯಿಂದ ಸೂಕ್ತವಲ್ಲ ಎಂದು ಅವರು ನುಡಿದರು.ರಾಜ್ಯದ ಸಚಿವರಾದ ಭೈರತಿ ಬಸವರಾಜ್, ಕೋಟ ಶ್ರೀನಿವಾಸ ಪೂಜಾರಿ, ಆನಂದ್ ಸಿಂಗ್, ಶಾಸಕರಾದ ಅರವಿಂದ ಬೆಲ್ಲದ್ ಮತ್ತು ರಾಜು ಗೌಡ ಅವರು ಉಪಸ್ಥಿತರಿದ್ದರು.

spot_img

Related News

ಮೋದಿ ಅವರ ನೇತೃತ್ವದಲ್ಲಿ 150 ಸ್ಥಾನಗಳ ಗೆಲುವ ಪಣ : ಯಡಿಯೂರಪ್ಪ 

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ...

ತಾಳ್ಮೆ ಕಳೆದುಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ 

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ....

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -