Ad imageAd image

ಅವಶ್ಯಕತೆಗಳಿಂದ ಶಿಕ್ಷಣದ ನಿಯಂತ್ರಣ: ಪಾಟೀಲ

ratnakar
ಅವಶ್ಯಕತೆಗಳಿಂದ ಶಿಕ್ಷಣದ ನಿಯಂತ್ರಣ: ಪಾಟೀಲ
WhatsApp Group Join Now
Telegram Group Join Now

ಬಾಗಲಕೋಟೆ: ಜಾಗತಿಕರಣ ಮತ್ತು ಸ್ಪರ್ಧಾತ್ಮಕತೆಯಿಂದ ಶಿಕ್ಷಣದಲ್ಲಿಯೂ ವ್ಯತಿರಿಕ್ತ ಬದಲಾವಣೆಯಾಗುತ್ತಿದ್ದು ಮಾರುಕಟ್ಟೆಯ ಅಗತ್ಯತೆಗಳು ಶಿಕ್ಷಣದ ಪಠ್ಯಕ್ರಮವನ್ನು ನಿರ್ಧರಿಸುತ್ತಿವೆ ಎಂದು ನಿವೃತ್ತ ಪ್ರಾಚಾರ್ಯರಾದ ಡಾ.ಬಿ. ಆರ್ ಪಾಟೀಲ್ ಅವರು ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಐ ತಂತ್ರಜ್ಞಾನದಿಂದ ಎಲ್ಲವೂ ಸುಲಭವಾಗಿ ಲಭಿಸುತ್ತಿದೆ. ಭಾರತೀಯ ಜೀವನ ಶೈಲಿಯಲ್ಲಿ ಸುಲಭವಾಗಿ ಸಿಗುತ್ತಿದ್ದ ನೀರು, ಆಹಾರ, ಆರೋಗ್ಯ, ಶಿಕ್ಷಣ ಇದೀಗ ಮಾರಟದ ವಸ್ತುವಾಗಿವೆ. ಎಲ್ಲವೂ ಸ್ಪರ್ಧಾತ್ಮಕಯುಗಕ್ಕೆ ಹೊಂದಿಕೊಳ್ಳುತ್ತಿದ್ದು ವಸಾಹತುಶಾಹಿ ಸಮಾಜ ನಿರ್ಮಾಣವಾಗುತ್ತಿದೆ. ಜ್ಞಾನ ಮತ್ತು ದುಡ್ಡಿಗೆ ಪ್ರಾಮುಖ್ಯತೆ ಹೆಚ್ಚುತ್ತಿದೆ. ಇಲ್ಲಿ ಯಶಸ್ಸು ಪಡೆಯಲು ಪ್ರಾಯೋಗಿಕ ಜ್ಞಾನದ ಕೌಶಲ್ಯ ಅಗತ್ಯ. ಪಠ್ಯಕ್ರಮದ ಜೊತೆಗೆ ಒಂದು ಕೌಶಲ್ಯದಲ್ಲಿ ಪರಿಪೂರ್ಣತೆ ಹೊಂದಿರಬೇಕು ಇದರಿಂದ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.

ನಮ್ಮಲ್ಲಿರುವ ಲೋಪಗಳನ್ನು ಸರಿಪಡಿಸಿಕೊಂಡು ದೈರ್ಯ ಮತ್ತು ಆತ್ಮವಿಶ್ವಾಸವನ್ನು ರೂಪಿಸಿಕೊಳ್ಳಬೇಕು. ಯಶಸ್ಸು ಎಂದರೆ ಹಣ ಸಂಪಾದಿಸುವುದಲ್ಲ ನಿಶ್ಚಿಂತೆ ಮತ್ತು ನೆಮ್ಮದಿಯನ್ನು ನೀಡುವ ಅಸ್ತ್ರ. ನಮ್ಮ ಸಂಪರ್ಕಕ್ಕೆ ಬಂದಿರುವ ಜನರಿಗೆ ನಮ್ಮಿಂದ ಎಷ್ಟು ನೆಮ್ಮದಿ ಹೆಚ್ಚಿದೆ ಎನ್ನುವುದರ ಮೇಲೆ ವ್ಯಕ್ತಿತ್ವ ನಿರ್ಣಯವಾಗುತ್ತದೆ ಎಂಬ ಜರ್ಮಿ ಬೆನತಮ್ ಸಿದ್ದಾಂತವನ್ನು ಜೀವನದಲ್ಲಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಮಾತನಾಡಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯ. ಅವುಗಳಿಂದ ಜೀವನ ಶೈಲಿಯಿಂದ ಬರುವ ಅನಾರೋಗ್ಯವನ್ನು ತಡೆದು ಚೈತನ್ಯವನ್ನು ಹೆಚ್ಚಿಸುತ್ತವೆ. ಆರೋಗ್ಯವೆ ಸಂದರ್ಯದ ಗುಟ್ಟಾದರೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಮಾನಸಿಕ ನೆಮ್ಮದಿಯ ಗುಟ್ಟಾಗಿವೆ ಅವುಗಳಲ್ಲಿ ತೊಡಗಿಕೊಳ್ಳಿ, ಯಶಸ್ಸು ಸಂತೃಪ್ತಿ ನೀಡುವಂತಿರಬೇಕು. ಸೋಮಾರಿತನದದಿಂದ ದ್ವಂದ್ವಗಳಲ್ಲಿ ಸಿಲುಕಿಕೊಳ್ಳದೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾನ್.ಎ.ಯು ರಾಠೋಡ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಡಾ.ಕೆ.ವಿ ಮಠ, ದೈಹಿಕ ಕ್ರೀಡಾ ನಿರ್ದೇಶಕರಾದ ಎಂ.ಎಂ ದೇವನಾಳ, ವಿದ್ಯಾರ್ಥಿ ಪ್ರತಿನಿಧಿಗಳಾದ ವಾರೇಶ ಯಂಕಂಚಿ, ಪಾರ್ವತಿ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article