ಹುಬ್ಬಳ್ಳಿ ರೈಲ್ವೆಯಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಭಾರತೀಯ ರೈಲ್ವೆ ಇಲಾಖೆಯಡಿ ಬರುವ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಲ್ಲಿ ಖಾಲಿ ಇರುವ 87 ಫೆಸಿಲಿಟೇಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆಸಕ್ತರು ಅರ್ಜಿ ಸಲ್ಲಿಸಬಹುದು.
ರೈಲ್ವೆ ಫೆಸಿಲಿಟೇಟರ್‌ಗಳು ರೈಲುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಟಿಕೆಟ್ ನೀಡಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳಲ್ಲಿ (ಎಟಿವಿಎಂ) ರೈಲ್ವೆ ATVM ಫೆಸಿಲಿಟೇಟರ್ ಆಗಿ ಕೆಲಸ ನಿರ್ವಹಿಸುವುದು ಇವರ ಕರ್ತವ್ಯವಾಗಿರುತ್ತದೆ. ಸದರಿ ನೇಮಕಾತಿಗಾಗಿ ನಿವೃತ್ತ ರೈಲ್ವೆ ನೌಕರರು ಮತ್ತು ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು. ರೈಲ್ವೆ ಎಟಿವಿಎಂ ಫೆಸಿಲಿಟೇಟರ್‌ಗಳ ಅವಧಿ ಒಂದು ವರ್ಷ. ಅವರು ಒಟ್ಟು ಟಿಕೆಟ್ ಮಾರಾಟದ ಮೌಲ್ಯದ 3% ಅನ್ನು ಕಮಿಷನ್ ಆಗಿ ಪಡೆಯುತ್ತಾರೆ
ಹುದ್ದೆಗಳ ವಿವರ ಹೀಗಿದೆ: ನೈರುತ್ಯ ರೈಲ್ವೆ ಹುಬ್ಬಳ್ಳಿ ಇಲಾಖೆ ಕೆಲಸದ ಸ್ಥಳ: ಕರ್ನಾಟಕ ಅರ್ಜಿಸಲ್ಲಿಸುವ ವಿಧಾನ: ಆಫ್ಲೈನ್ ಹುದ್ದೆಗಳ ಸಂಖ್ಯೆ: 87 ಪೋಸ್ಟ್ ಹೆಸರು: ATVM ಫೆಸಿಲಿಟೇಟರ್ ಸಂಬಳ: ನೈಋತ್ಯ ರೈಲ್ವೆ ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: KSR ಬೆಂಗಳೂರು ನಗರ-16 ಹುದ್ದೆಗಳು ಬೆಂಗಳೂರು-5 ಹುದ್ದೆಗಳು ಯಶವಂತಪುರ-8 ಹುದ್ದೆಗಳು ತುಮಕೂರು-4 ಹುದ್ದೆಗಳು ಕೃಷ್ಣರಾಜಪುರಂ-6 ಹುದ್ದೆಗಳು ಕೆಂಗೇರಿ-4 ಹುದ್ದೆಗಳು ಹಿಂದೂಪುರ-5 ಮಾಲೂರು-3 ರಾಮನಗರ-2 ಕುಪ್ಪಂ-2 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-4 ಬಂಗಾರಪೇಟೆ-3
ವಿದ್ಯಾರ್ಹತೆ: ನೈಋತ್ಯ ರೈಲ್ವೆ ನಿಯಮಗಳ ಪ್ರಕಾರ ವಯೋಮಿತಿ: ನೈಋತ್ಯ ರೈಲ್ವೆ ನಿಯಮಗಳ ಪ್ರಕಾರ ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿಸಲ್ಲಿಸುವ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23-07-2024 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ಆಗಸ್ಟ್-2024