spot_img
spot_img
spot_img
spot_img
spot_img
28.1 C
Belagavi
Sunday, December 3, 2023
spot_img

ಚಂದ್ರಯಾನ-03: ಲ್ಯಾಂಡಿಂಗ್ ಆಯ್ತು ಮುಂದೇನು? ಇಲ್ಲಿದೆ ಓದಿ

ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದೆ. ಒಂದು ಚಂದ್ರನ ದಿನಕ್ಕೆ ಅಂದರೆ 14 ದಿನಗಳ ರೋವರ್ ಕಾರ್ಯಾಚರಣೆಗಳ ತಿಳಿಯುವ ಪ್ಲಾನ್ ವಿಜ್ಞಾನಿಗಳು ಮಾಡಿದ್ದಾರೆ.

ವಿಕ್ರಮ್ ಲ್ಯಾಂಡರ್‌ನಲ್ಲಿ ಡೇಟಾವನ್ನು ಒದಗಿಸುವ ಐದು ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿದ್ದು, ಲ್ಯಾಂಡಿಂಗ್ ನಂತರ ಪ್ರಗ್ಯಾನ್ ರೋವರ್‌ಗಾಗಿ ರಾಂಪ್ ಅನ್ನು ರಚಿಸುತ್ತದೆ. ಆರು ಚಕ್ರಗಳ ಪ್ರಗ್ಯಾನ್ ರೋವರ್‌ನಲ್ಲಿ ಎರಡು ಚಕ್ರಗಳಲ್ಲಿ ಒಂದರಲ್ಲಿ ಅಶೋಕ ಚಕ್ರದ ಚಿಹ್ನೆಯಿದ್ದು, ಮತ್ತೊಂದರಲ್ಲಿ ಇಸ್ರೋ ಲಾಂಛನವಿದ್ದು, ಇವುಗಳು ಚಂದ್ರನ ಮೇಲ್ಮೈ ಮೇಲೆ ಭಾರತದ ಮುದ್ರೆಯನ್ನು ಅಚ್ಚು ಒತ್ತುತ್ತವೆ. ಈ ಮುದ್ರೆ ಸಾವಿರಾರು ವರ್ಷಗಳ ಕಾಲ ಹಾಗೆ ಇರಲಿದೆ.

ಈ ರೋವರ್ ಚಂದ್ರನ ಮೇಲ್ಮೈಯನ್ನು ಸ್ಕ್ಯಾನ್ ಮಾಡಲು ನ್ಯಾವಿಗೇಷನ್ ಕ್ಯಾಮೆರಾಗಳನ್ನು ಬಳಸುತ್ತದೆ. ರೋವರ್‌ನ ವೈಜ್ಞಾನಿಕ ಪೇಲೋಡ್‍ಗಳು ಚಂದ್ರನ ಅಂಶಗಳು, ವಾತಾವರಣ ಮತ್ತು ಇತರ ಅಂಶಗಳನ್ನು ಅಧ್ಯಯನ ಮಾಡುತ್ತದೆ. ಇದು ಚಂದ್ರಯಾನದ ವಸ್ತು, ಸ್ಯಾಂಪಲ್ ಗಳನ್ನು ನೀಡಲಿದೆ. ಚಂದ್ರನ ಮೇಲಿನ ಕಂಪನಗಳು,ಚಂದ್ರನ ಒಳರಚನೆ ಬಗ್ಗೆ ಸುಳಿವು ತಿಳಿಯುತ್ತದೆ. ಚಂದ್ರನ ಮಣ್ಣಿನಿಂದ ರಾಸಾಯನಿಕ ಸಂಯೋಜನೆ ಸಿಗುತ್ತದೆ. ಉಷ್ಣ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಭೂಕಂಪನ ಚಟುವಟಿಕೆಯನ್ನು ಅಳೆಯುತ್ತದೆ. ಚಂದ್ರ ಮತ್ತು ಭೂಮಿಯ ನಡುವಿನ ಅಂತರವನ್ನು ಮಾಪನ ಮಾಡಲು ಸಹಾಯ ಮಾಡುತ್ತದೆ. ಇದು ಚಂದ್ರನ ಡೈನಾಮಿಕ್ಸ್‍ನ ಬಗ್ಗೆ ಮಾಹಿತಿ ನೀಡಲಿದೆ.

ಒಟ್ಟಿನಲ್ಲಿ ಚಂದ್ರಯಾನ-3 ಚಂದ್ರನ ಸಂಯೋಜನೆ, ಇತಿಹಾಸ ಮತ್ತು ಭವಿಷ್ಯದ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಲಿದೆ.

Related News

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಕಂಡುಬಂದಿದೆ. ಕಾಂಗ್ರೆಸ್​ನ ಮೂವರು ಸಂಸದರಿಗೆ ಜಯವಾಗಿದ್ದು, ಬಿಜೆಪಿಯ ಮೂವರು ಸಂಸದರಿಗೆ ಸೋಲಾಗಿದೆ. ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್​ನ ರೇವಂತ್ ರೆಡ್ಡಿ, ಉತ್ತಮ್ ಕುಮಾರ್ ರೆಡ್ಡಿ, ಕೊಮಟಿರೆಡ್ಡಿ...

ಬೆಳಗಾವಿ ಹೆಮ್ಮೆ ಪುತ್ರ ಬಾಲಚಂದ್ರ ಕಿಲಾರಿ ಸನ್ಮಾನ ಕಾರ್ಯಕ್ರಮದಲ್ಲಿ ಗೈರ್ ಹಾಜರಾದ ಬೆಳಗಾವಿ ಮಹಾಪೌರ ಹಾಗೂಉಪ ಮಹಾಪೌರ

ಉತ್ತರಕಾಶಿಯ ಸಿಲ್ಕ್ಯಾರ್ ಸುರಂಗದಲ್ಲಿ 17 ದಿನಗಳ ಕಾಲ 41 ಕಾರ್ಮಿಕರು ಸಿಲ್ಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತೆಗೆದಿರುವ ಬೆಳಗಾವಿಯ ಹೆಮ್ಮೆಯ L&D ಕಂಪನಿಯ ಉದ್ಯೋಗಿ ಬಾಲಚಂದ್ರ ಕಿಲಾರಿ ದುಡಪಿ ಕೇದಾರ,ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು...

Latest News

- Advertisement -
- Advertisement -
- Advertisement -
- Advertisement -