ಬೈಲಹೊಂಗಲ: ಎಚ್ಐವಿ ಅಥವಾ ಏಡ್ಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ರೊಗದಿಂದ ದೂರವಿರಬೇಕು ಹೊರತು ರೋಗಿಯಿಂದಲ್ಲ ಇದರಿಂದ ಮಾತ್ರ ಸಂಪೂರ್ಣವಾಗಿ ಮಹಾಮಾರಿ ರೋಗವನ್ನು ನಿಯಂತ್ರಣಕ್ಕೆ ತರಲು ಸಾದ್ಯವಾಗುತ್ತದೆ ಎಂದು ಯುವ ನ್ಯಾಯವಾದಿ, ಕು.ಮೇಘಾ ಸೊಮಣ್ಣವರ ಹೇಳಿದರು.
ಇತ್ತಿಚ್ವಿಗೆ ಪಟ್ಟಣದ ತಾಲ್ಲೂಕಾ ಸರ್ಕಾರಿ ಅಸ್ಪತ್ರೆಯಲ್ಲಿ, ರೈಟ್ಸ ಸಿ ಎಸ್ ಆರ್ ಲಿಮಿಟೆಡ್, ಆಶ್ರಯ ಫೌಂಡೇಶನ್ ಬೆಳಗಾವಿ ಇವರ ಆಶ್ರಯದಲ್ಲಿ, ಬೆಂಬಲ ಗುಂಪು ಸಭೆ, ರೇಷನ್ ಕಿಟ್ ವಿತರಣಾ ಮತ್ತು ಕಾನೂನು ಅರಿವು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಹಾಮಾರಿ ಎಚ್ಐವಿ ಪೀಡಿತರನ್ನು ಸಮಾಜದ ಮುಖ್ಯವಾಹಿನಿಗೆ ತರದೆ ಅಸಡ್ಯವಾಗಿ ಕಾಣುವದನ್ನು ಸಮಾಜ ಬಿಡಬೇಕು. ಬೆಳಗಾವಿಯ ಸ್ಪಂದನ ವಿಹಾನ್ ಯೋಜನೆ ಮತ್ತು ಬೈಲಹೊಂಗಲ್ ತಾಲೂಕು ಸಾರ್ವಜನಿಕ ಆಸ್ಪತ್ರೆ ಲಿಂಕ್ ಎ ಆರ್ ಟಿ ಕೇಂದ್ರ ಇವರ ಸಹಯೋಗದೊಂದಿಗೆ, ವಿಶೇಷವಾಗಿ ಎಚ್ ಐ ವಿ ಸೋಂಕಿತ ವಿಧಿವೆಯರಿಗೆ ಕಾನೂನಾತ್ಮಕ ಪರಿಹಾರಗಳ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ. ಹದಿಹರೆಯದ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಬೆಂಬಲ ಗುಂಪು ಸಭೆ ಮಾಡುವದು ಮತ್ತು ರೊಗ ಪೀಡಿತರಿಗೆ ರೇಷನ್ ಕಿಟ್ ವಿತರಣೆ ಮಾಡುವ ಕಾರ್ಯ ನಿಜವಾಗಲು ನಾಗರಿಕ ಸಮಾಜದಲ್ಲಿಮಹತ್ತರ ಕಾರ್ಯವಾಗಿದೆ. ಯಾವುದೊ ಮೂಲದಿಂದ ರೋಗ ಅಂಟಿಕೊಂಡ ರೋಗಿಗಳಿಗೆ ದೊರೆಯುವ ಕಾನೂನಾತ್ಮಕ ಸಹಾಯಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ತಾಲುಕಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿರ್ಮಲ ಮಹಾಂತಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್ ಆಯ್ ವಿ ಭಾದಿತ ವಿಧವೆಯರಿಗೆ ಶಿಕ್ಷಣ, ಮಾನಸಿಕ ಬೆಂಬಲ, ಎಆರ್ ಟಿ ಚಿಕಿತ್ಸೆಯ ಮಹತ್ವ ಪಡೆದುಕೊಳ್ಳುವಂತೆ ತಿಳಿಸಿದರು. ಆಶ್ರಯ ಫೌಂಡೇಶನ್ ಬೆಳಗಾವಿಯ ಸಂಸ್ಥಾಪಕ ಅಧ್ಯಕ್ಷೆ ನಾಗರತ್ನ ಎಸ್ ರಾಮಗೌಡ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಚ್ ಆಯ್ ವಿ ಸೊಂಕಿತರಿಗೆ ಪೌಷ್ಟಿಕಾಹಾರ ಕಿಟ್ ಮತ್ತು ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು. ತಾಲೂಕ ಆಸ್ಪತ್ರೆ ಲಿಂಕ್ ಎ ಅರ್ ಟಿ ಕೇಂದ್ರದ ಆಪ್ತಸಮಾಲೊಚಕ ಕಲ್ಲಪ್ಪಾ, ಸ್ಪಂದನ ವಿಹಾನ್ ಯೋಜನೆ ಸಂಯೋಜಕಿ ರೆಣಕೆ ಕಸ್ತೂರಿ ಉಪಸ್ಥಿತಿ ಇದ್ದರು.