ಬೆಳಗಾವಿ : ರಂಗ ಪಂಚಮಿ ನಂತರ ಈ ಕಾರ್ಯಕ್ರಮ ಅಯೋಜನೆ ಮಾಡಿರುವುದು ಜಿಲ್ಲೆಯ ಪಾಲಿಗೆ ಇದೇ ಮೊದಲು ಎಂದು ಶಾಸಕ ಅಭಯ ಪಾಟೀಲ ಹೇಳಿದರು . ಡೀಕೆ ಮೋಟೀವ್ ಹಾಗೂ ಗಡ್ಡೆ ಡೆವಲಪರ್ಸ್ ಅಂಡ್ ಬುಲ್ಡರ್ಸ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ ರಂಗ ಭರಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಾಡಿನಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮುಂದಿನ ವರ್ಷದಿಂದ ಪ್ರತಿವರ್ಷ ಹಾಸ್ಯಸಂಜೆ ಹಾಗೂ ಸಂಗೀತ ಕಾರ್ಯ ಕ್ರಮವನ್ನು ಆಯೋಜಿಸಲು ತಮ್ಮ ಸಹಕಾರ ಬೇಕು ಎಂದು ಅವರು ಹೇಳಿದರು. ಇನ್ನು ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೋಳಿ ಆಚರಣೆ ಯಶ್ವಸಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಮಾತನಾಡಿ, ಕೊರೊನಾ ಕಾರಣಕ್ಕೆ ಸಾಕಷ್ಟು ಹೈರಾಣಾದ ಜನರಿಗೆ ಜೀವನೋತ್ಸಾಹ ಭರಿತ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.