ಧಾರವಾಡ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೆಡಿಎಸ್ ಗೆ ಹೋಗುವುದಿಲ್ಲ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವರು ಮಂತ್ರಿ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಪಕ್ಷ ತೊರೆದು ಹೋಗುವುದಿಲ್ಲ. ಆ ವಿಶ್ವಾಸ ನನಗಿದೆ. ಆದೆಷ್ಟು ಬೇಗ ಅವರು ಸಚಿವರಾಗುತ್ತಾರೆ. ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದರೆ ಆ ಪಕ್ಷದಿಂದ ಏನಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದೆ ಮಂತ್ರಿ ಮಂಡಲ ವಿಸ್ತರಣೆ ಆಗಲಿದ್ದು, ಅದರಲ್ಲಿ ರಮೇಶ್ ಜಾರಕಿಹೊಳಿ ಅವರು ಸಚಿವ ಆಗೇ ಆಗ್ತಾರೆ. ನಾನು ಸಚಿವ ಹುದ್ದೆಯ ಆಕಾಂಕ್ಷಿ ಅಲ್ಲ. ಮುಂದೆ ಮಂತ್ರಿ ಮಾಡುವಾಗ ಜಾರಕಿಹೊಳಿ ಹೆಸರೇ ಮೊದಲು ಇರಲಿದೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಕಿಹೊಳಿ ಬಿಜೆಪಿ ತೊರಯಲಿದ್ದಾರೆ ಎಂಬ ಚರ್ಚೆಯನ್ನು ತಳ್ಳಿ ಹಾಕಿದ್ದರು.