spot_img
spot_img
spot_img
18 C
Belagavi
Thursday, September 29, 2022
spot_img

ಪುನೀತ್ ಅವರು ನೆನಪು ಜನರ ಹೃದಯದಲ್ಲಿ ಶಾಶ್ವತ : ಬಾಲಚಂದ್ರ ಜಾರಕಿಹೊಳಿ

spot_img

ಬೆಳಗಾವಿ : ಕೆಎಂಎಫ್ ನಂದಿನಿ ರಾಯಭಾರಿಯಾಗಿದ್ದ ಜನಪ್ರೀಯ ನಟ ದಿ. ಪುನೀತ್ ರಾಜಕುಮಾರ್ ಅವರು ಅಗಲಿ ಹೋಗಿದ್ದರೂ, ಇನ್ನೂ ಅವರ ನೆನಪು ಜನರ ಹೃದಯದಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಬೆಂಗಳೂರಿನ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ದಿ. ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಜರುಗಿದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಎಂಎಫ್ ಬೆಳವಣಿಗೆಯಲ್ಲಿ ಪುನೀತ್ ರಾಜಕುಮಾರ ಅವರ ಪಾತ್ರ ಹಿರಿದಾಗಿತ್ತು ಎಂದು ಹೇಳಿದರು.

ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ (ಮಾರ್ಚ-17)ದ ಅಂಗವಾಗಿ ಸ್ವಯಂ ಪ್ರೇರಿತರಾಗಿ ನಮ್ಮ ಸಂಸ್ಥೆಯ ನೌಕರರು ರಕ್ತದಾನ ಮಾಡಿರುವುದು ಶ್ಲಾಘನೀಯವಾಗಿದೆ. ಕೆಎಂಎಫ್ ರಾಜ್ಯದ ಎಲ್ಲ ವರ್ಗಗಳ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ರುಚಿ-ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಂದಿನಿ ಬ್ರಾಂಡ್ ಅಡಿಯಲ್ಲಿ ಕಳೆದ 4 ದಶಕಗಳಿಂದ ಒದಗಿಸುತ್ತ ಬರುತ್ತಿದೆ. ರಾಜ್ಯ ಮತ್ತು ಹೊರರಾಜ್ಯಗಳಲ್ಲಿಯೂ ಗ್ರಾಹಕರ ಆಯ್ಕೆ ನಮ್ಮ ನಂದಿನಿ ಬ್ರಾಂಡ್ ಆಗಿದೆ ಎಂದು ಅವರು ಹೇಳಿದರು.

ದಿ. ಪುನೀತ್ ರಾಜಕುಮಾರ್ ಅವರಿಗೆ ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಫಾರಸ್ಸು ಮಾಡಿದ್ದಾರೆಂದು ಹೇಳಿದರು.

ಮೇರು ನಟ ಡಾ. ರಾಜಕುಮಾರ್ ಅವರ ಕುಟುಂಬದ ಪರವಾಗಿ ಹಿರಿಯ ನಟ ರಾಮಕುಮಾರ್ ಅವರ ಪುತ್ರಿ ಹಾಗೂ ಚಿತ್ರನಟಿ ಧನ್ಯಾ ರಾಮಕುಮಾರ್ ಅವರು ಆಗಮಿಸಿ ಕೆಎಂಎಫ್ ಹಮ್ಮಿಕೊಂಡಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಧೇಶಗಳನ್ನು ಪ್ರಶಂಸಿಸಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಕಾ.ಪು. ದಿವಾಕರಶೆಟ್ಟಿ, ಶ್ರೀಶೈಲಗೌಡ ಪಾಟೀಲ, ನಂಜುಂಡಸ್ವಾಮಿ, ಎಂ.ಡಿ. ಬಿ.ಸಿ. ಸತೀಶ, ಕಹಾಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

spot_img

Related News

ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು: ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ಡಿ ಕೆ ಶಿವಕುಮಾರ್...

ಮೂರು ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ ಚವ್ಹಾಣ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -