ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿವತಿಯಿಂದ “ಪೂಜ್ಯರ ನಡೆ ಭಕ್ತರ ಕಡೆಗೆ* ಶ್ರಾವಣ ಮಾಸದ ನಿಮಿತ್ತ ಪೂಜ್ಯ ಶ್ರೀ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂಜ್ಯರ ನಡೆ ಭಕ್ತರ ಕಡೆಗೆ ಕಾರ್ಯಕ್ರಮವನ್ನು ಪ್ರತಿದಿನ ಹಮ್ಮಿಕೊಳ್ಳಲಾಗಿದ್ದು,
ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಭಕ್ತರಿಗೆ ಶ್ರಾವಣ ಮಾಸದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ದಿ. 05.09.2023 ರಂದು 19ನೇಯ ದಿನದ ಪಾದಯಾತ್ರೆಯನ್ನು ಮಹಾಂತೇಶ್ ನಗರದಲ್ಲಿ ಕರ್ನಾಟಕ ಬ್ಯಾಂಕ್ ಮಾರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪೂಜ್ಯ ಶಿವಾನಂದ ಶ್ರೀಗಳು ಹಳಂಗಳಿ, ಓಂ ಗುರೂಜಿ, ಕಾರ್ಯಕ್ರಮದ ಆಯೋಜಕರಾದ,
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಬಸವರಾಜ್ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಯುವ ಘಟಕದ ಸಂಚಾಲಕರಾದ
ಪ್ರೇಮ್ ಮಲ್ಲಪ್ಪ ಚೌಗಲಾ, ನಗರ ಘಟಕದ
ಉಪ ಅಧ್ಯಕ್ಷರಾದ ಮೋಹನ್ ಗುಂಡ್ಲುರನ ಗರ ಘಟಕದ ಪ್ರಧಾನಕಾರ್ಯದರ್ಶಿಸಿ ಎಂ ಬೂದಿಹಾಳ, ಮಹಿಳಾ ಘಟಕದ ಪದಾಧಿಕಾರಿಗಳಾದ ಶೋಭಾ ಶಿವಳಿ, ಅನ್ನಪೂರ್ಣ ಮಳಗಲಿ ದ್ರಾಕ್ಷಾಯಿಣಿ ಉಡದಾರ, ಸುಜಾತಾ ಮತ್ತಿಕಟ್ಟಿ ಪ್ರೀತಿ ಮಠದ ,
ನಗರ ಘಟಕದ ರವೀಂದ್ರ ಹೆದ್ದೂರಶೆಟ್ಟಿ, ಬಹಾದ್ದೂರಿ, ನ್ಯಾಯವಾದಿ ಯಕ್ಷಂಬಿ, ಹಾಗು ಮಹಾಂತೇಶ್ ನಗರದ ಗುರು ಹಿರಿಯರು ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.