ಜಾಗತಿಕ ಲಿಂಗಾಯತ ಮಹಾಸಭಾ ಘಟಕ ಬೆಳಗಾವಿ ವತಿಯಿಂದ ಪೂಜ್ಯರ ನಡೆ ಭಕ್ತರ ಕಡೆಗೆ ಶ್ರಾವಣ ಮಾಸದ ನಿಮಿತ್ತ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ವತಿಯಿಂದ ರುದ್ರಾಕ್ಷಿ ಮಠ ನಾಗನೂರು ಶ್ರೀಗಳು ಡಾ. ಅಲಮ್ ಪ್ರಭುಜಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂಜ್ಯರ ನಡೆ ಭಕ್ತರ ಕಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿದಿನ ಬೆಳಗಾವಿ ನಗರದ ನಗರಗಳಲ್ಲಿ ಸಂಚರಿಸಿ ಭಕ್ತರಾಗಿ ಶ್ರಾವಣ ಮಾಸದ ನಿಮಿತ್ತ ಶ್ರಾವಣ ಮಾಸದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಇಂದು ಬೆಳಗಾವಿ ಕುವೆಂಪು ನಗರದ ಚಿಕ್ಕು ಬಾಗ್ ದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಆಯೋಜಕರಾದ ಜಾಗತಿಕ ಲಿಂಗಾಯತ ಮಹಾಸಭೆ ಬೆಳಗಾವಿ ಘಟಕದ ಅಧ್ಯಕ್ಷರಾದ ಬಸವರಾಜ್ ರೊಟ್ಟಿ, ಯುವ ಸಂಚಾಲಕ, ಪ್ರೇಮ ಮಲ್ಲಪ್ಪ ಚೌಗಲಾ, ಮಹಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಹಾಗೂ ಬೂದಿಹಾಳ, ರವಿ ಗುಂಡಪ್ಪನರ, ಮುರುಗೇಶ್ ಬಾಳೆ ,ಇವರ ನೇತೃತ್ವದಲ್ಲಿ ಜರುಗಿತು.