spot_img
spot_img
spot_img
28.1 C
Belagavi
Thursday, September 29, 2022
spot_img

ಶಾಸಕ ಬೆನಕೆರಿಂದ ಶಿವಬಸವ ನಗರದ ಕುಂದುಕೊರತೆಗಳ ಕುರಿತು ಜನಸಂಪರ್ಕ ಸಭೆ

spot_img

ಬೆಳಗಾವಿ : ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಶಿವಬಸವ ನಗರ ರಹವಾಸಿಗಳ ಕುದುಂಕೊರತೆಗಳನ್ನು ನಿವರಿಸುವ ನಿಟ್ಟಿನಲ್ಲಿ ಶಿವಬಸವ ನಗರದ ಅನುಭವ ಮಂಟಪದಲ್ಲಿ ಜನಸಂಪರ್ಕ ಸಭೆಯನ್ನು ಜರುಗಿಸಿದರು.

ಸಭೆಯಲ್ಲಿ ಶಿವಬಸವ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಡ್ರೈನೇಜ ಸಮಸ್ಯೆ ಹಾಗೂ ಅನುಭವ ಮಂಟಪದ ಹತ್ತಿರವಿರುವ ಉದ್ಯಾನವನದ ಅಭಿವೃಧ್ದಿ ಮತ್ತು ಪಂತ ಬಾಳೆಕುಂದ್ರಿ ಇಂಜಿನೀಯರಿಂಗ್ ಕಾಲೇಜ್ ಹತ್ತಿರವಿರುವ ಉದ್ಯಾನವನಗಳ ಅಭಿವೃದ್ದಿ ಕುರಿತು ಅಲ್ಲಿನ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿದ ಅವರು ತುರ್ತಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದರಲ್ಲದೆ ಮಹಾನಗರ ಪಾಲಿಕೆಯ ಅನುದಾನದಲ್ಲಿ ಉದ್ಯಾನವನಗಳನ್ನು ಅಭಿವೃದಿದ ಪಡಿಸಲಾಗುವುದು ಎಂದು ಭರವಸೆಯನ್ನು ನೀಡಿದರು.

ಬಳಿಕ ಶಿವಬಸವ ನಗರದಲ್ಲಿ ಈಗಾಗಲೆ ಅನೇಕ ಅಭಿವೃಧ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು. ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆಯ ಅನುದಾನದಲ್ಲಿ ಶಿವಬಸವ ನಗರದ ಸಮಗ್ರ ಅಭಿವೃಧ್ದಿಯನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಸೇವಕಿ ರೇಖಾ ಹೂಗಾರ, ನಿವೃತ್ತ ಡಿ.ಎಸ್.ಪಿ ಅಶೋಕ ಸದಲಗೆ, ಮಹೇಶ ಮುರಘಾಮಠ (ಬಿ.ಜೆ.ಪಿ ಯುವಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉತ್ತರ ಮಂಡಳ), ಮೋಹನ ಹೂಗಾರ (ವಕೀಲರು), ಸ್ಥಳಿಯರಾದ ರಾಜೇಶ ದೇಸಾಯಿ, ಮದನಗೌಡ ಪಾಟೀಲ ಹಾಗೂ ಕೆ.ಇ.ಬಿ. ಸಹಾಯಕ ಅಬಿಯಂತರ ಆರ್.ಎಸ್. ಪಾಟೀಲ ಮತ್ತು ಇತರ ಸ್ಥಳಿಯರು ಉಪಸ್ಥಿತರಿದ್ದರು.

spot_img

Related News

ತಾಳ್ಮೆ ಕಳೆದುಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ 

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ....

ಯಾರ ಮೇಲೆ ಜಾಸ್ತಿ ಪ್ರೀತಿ ಇರುತ್ತೋ ಅವರ ಮೇಲೆ ರೈಡ್ ಮಾಡ್ತಾರೆ : ಡಿಕೆಶಿ 

ಬೆಂಗಳೂರು: ಈಗಾಗಲೇ ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -