Ad imageAd image

ಭಾರತದ ಅಭಿವೃದ್ಧಿ ಪಯಣದಲ್ಲಿ ರತನ್ ಟಾಟಾ ಕೊಡುಗೆ ಅವಿಸ್ಮರಣೀಯ: ಮೋಹನ್ ಭಾಗವತ್

ratnakar
ಭಾರತದ ಅಭಿವೃದ್ಧಿ ಪಯಣದಲ್ಲಿ ರತನ್ ಟಾಟಾ ಕೊಡುಗೆ ಅವಿಸ್ಮರಣೀಯ: ಮೋಹನ್ ಭಾಗವತ್
WhatsApp Group Join Now
Telegram Group Join Now

ಭಾರತದ ಅಭಿವೃದ್ಧಿ ಪಯಣದಲ್ಲಿ ರತನ್ ಟಾಟಾ ಕೊಡಗು ಅವಿಸ್ಮರಣೀಯವಾದದ್ದು ಎಂದು ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಕೂಡ ಸಂತಾಪ ಸೂಚಿಸಿದ್ದಾರೆ.

ರತನ್ ಟಾಟಾ ಅವರ ಕೊಡುಗೆ ಸ್ಮರಣೀಯವಾಗಿ ಉಳಿಯುತ್ತದೆ ಮತ್ತು ಅವರು ಉದ್ಯಮದಲ್ಲಿ ಅನೇಕ ಮಾನದಂಡಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು. ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನವು ಅತ್ಯಂತ ದುಃಖಕರವಾಗಿದೆ.

ಅವರ ನಿಧನದಿಂದ ದೇಶ ತನ್ನ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಿದೆ.ಭಾರತದ ಅಭಿವೃದ್ಧಿ ಪಯಣಕ್ಕೆ ಅವರ ಕೊಡುಗೆ ಸ್ಮರಣೀಯವಾಗಿ ಉಳಿಯುತ್ತದೆ. ಉದ್ಯಮದ ಪ್ರಮುಖ ಕ್ಷೇತ್ರಗಳಲ್ಲಿ ಅನೇಕ ಹೊಸ ಮತ್ತು ಪರಿಣಾಮಕಾರಿ ಉಪಕ್ರಮಗಳ ಜೊತೆಗೆ ರತನ್ ಟಾಟ್ ಅನೇಕ ಉತ್ತಮ ಮಾನದಂಡಗಳನ್ನು ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದರು.

WhatsApp Group Join Now
Telegram Group Join Now
Share This Article