ಬೆಳಗಾವಿ: ಜಿಲ್ಲಾ ಸೊಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ಮಾಡಿ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಕಟ್ಟಡ ಪರವಾನಿಗೆ ಪಡೆಯದೆ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವುದನ್ನು ತಡೆಯಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದ ವೇಳೆ ಜೈ ಕಿಸಾನ್ ಹೋಲ್ ಸೇಲ್ ಮರ್ಚೆಂಟ್ ಅಸೋಸಿಯೇಷನ್ ಎಪಿಎಂಸಿ ವರ್ತಕರಾದ ಸತೀಶ್ ಪಾಟೀಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ
ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಕಟ್ಟಡ ಪರವಾನಿಗೆ ಪಡೆಯದೆ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವಾಗ ಉಚ್ಛ ನ್ಯಾಯಾಲಯವು ತಡೆಯಜ್ಞೆಯನ್ನು ಈ ಹಿಂದೆ ನೀಡಲಾಗಿತ್ತು.
ಮಹಾನಗರ ಪಾಲಿಕೆ ವತಿಯಿಂದ 2017ರಲ್ಲಿ ಕಲಂ 321 ಜಾರಿ ಮಾಡಲಾಯಿತು. ಆದರೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾನೂನು ಭಾಹಿರವಾಗಿ 2020ರಲ್ಲಿ ಕಟ್ಟಡ ಪವಾನಿಗೆಯನ್ನು ನೀಡಿದ್ದು ಅಧಿಕಾರ ದುರ್ಬಳಿಕೆ ಮತ್ತು ಮಹಾನಗರ ಪಾಲಿಕೆ ಬರಬೇಕಾದ ತೆರಿಗೆಯಲ್ಲಿ ಭಾರಿ ವ್ಯತ್ಯಾಸ ಇರುತ್ತದೆ.
ಕಟ್ಟಡ ಪರವಾನಿಗೆಯನ್ನು ರದ್ದುಗೊಳಿಸಿ ಹಾಗೂ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.