ಪ್ರಧಾನಿ ಮೋದಿ ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ವಂದೇ ಭಾರತ್ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಅಸ್ಸಾಂನ ಗುವಾಹಟಿಗೆ ಹೊರಟಿದೆ.
ಈ ಅತ್ಯಾಧುನಿಕ ರೈಲು, ವೇಗ, ಸೌಕರ್ಯ ಮತ್ತು ವರ್ಧಿತ ಸಂಪರ್ಕವನ್ನು ಒದಗಿಸುವ ಜತೆಗೆ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ಭಾನುವಾರ ಟ್ವೀಟ್ ಮಾಡಿದ್ದಾರೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ಕೃಷ್ಟಗೊಳಿಸುತ್ತದೆ ಎಂದು ಹೇಳಿದ್ದಾರೆ.
ಈ ರೈಲು ವಾರದಲ್ಲಿ ಆರು ದಿನಗಳು ಚಲಿಸುತ್ತದೆ ಮತ್ತು ಆರು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ನ್ಯೂ ಅಲಿಪುರ್ದೂರ್, ಕೊಕ್ರಜಾರ್, ನ್ಯೂ ಬೊಂಗೈಗಾಂವ್ ಮತ್ತು ಕಾಮಾಖ್ಯ, ಹಾಗೆಯೇ ನ್ಯೂ ಜಲ್ಪೈಗುರಿ ಮತ್ತು ಗುವಾಹಟಿಯಲ್ಲಿ ಜಂಕ್ಷನ್ಗಳಲ್ಲಿ ಇವುಗಳ ಸೇವೆ ಇದೆ.