ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಗೊಂದಲಕ್ಕೆ ಮಂಗಳವಾರ ತೆರೆ ಬಿದ್ದಿದೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಡಿ.5ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಡಿಸಿಎಂ ಸ್ಥಾನ ವಹಿಸಿಕೊಳ್ಳಲು ಶಿಂಧೆ ಮತ್ತು ಅಜಿತ್ ಪವಾರ್ ಸಮ್ಮತಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಮಹಾಯುತಿ ಮೈತ್ರಿ ನಾಯಕರು ಡಿ.4 ರಂದು (ಇಂದು) ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ಸರಕಾರ ರಚನೆ, ಅಧಿಕಾರ ಹಂಚಿಕೆ ಸೂತ್ರ ಕುರಿತಂತೆ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಹಾಗೂ ಮಾಜಿ ಡಿಸಿಎಂ ದೇವೇಂದ್ರ ಫಡ್ನವಿಸ್ ನಡುವೆ ಮಂಗಳವಾರ ಸಂಜೆ ನಡೆದ ಮಾತುಕತೆಯಲ್ಲಿ ಬಿಕ್ಕಟ್ಟು ಇತ್ಯರ್ಥಗೊಂಡಿದೆ. ಅನಾರೋಗ್ಯದ ಕಾರಣ ಮಂಗಳವಾರ ಠಾಣೆಯ ಆಸ್ಪತ್ರೆಗೆ ತೆರಳಿದ್ದ ಏಕನಾಥ್ ಶಿಂಧೆ, ಚಿಕಿತ್ಸೆ ಬಳಿಕ ಸಂಜೆ ಮುಂಬಯಿ ನಿವಾಸಕ್ಕೆ ಮರಳಿದರು. ಬಳಿಕ ದೇವೇಂದ್ರ ಫಡ್ನವಿಸ್ ಅಲ್ಲಿಗೆ ತೆರಳಿ ಆರೋಗ್ಯ ವಿಚಾರಿಸುವ ಜತೆಗೆ ಸರಕಾರ ರಚನೆ ಕುರಿತು ಚರ್ಚಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಗೊಂದಲಕ್ಕೆ ಮಂಗಳವಾರ ತೆರೆ ಬಿದ್ದಿದೆ. ಮಹಾಯುತಿ ಮೈತ್ರಿ ನಾಯಕರು ಡಿ.4 ರಂದು (ಬುಧವಾರ) ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೈತ್ರಿ ನಾಯಕನ ಆಯ್ಕೆಯ ಕಗ್ಗಂಟಿನ ನಡುವೆ ಮಹಾಯುತಿ ಮೈತ್ರಿ ಸರಕಾರ ರಚನೆ, ಅಧಿಕಾರ ಹಂಚಿಕೆ ಸೂತ್ರ ಕುರಿತಂತೆ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಹಾಗೂ ಮಾಜಿ ಡಿಸಿಎಂ ದೇವೇಂದ್ರ ಫಡ್ನವಿಸ್ ನಡುವೆ ಮಂಗಳವಾರ ಸಂಜೆ ನಡೆದ ಮಾತುಕತೆಯಲ್ಲಿ ಬಿಕ್ಕಟ್ಟು ಇತ್ಯರ್ಥಗೊಂಡಿದ್ದು, ಡಿಸಿಎಂ ಸ್ಥಾನ ವಹಿಸಿಕೊಳ್ಳಲು ಶಿಂಧೆ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.