ಬೆಳಗಾವಿ: ಜಿಲ್ಲೆ ಅಥಣಿ ತಾಲೂಕಿನ ದರೂರ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಪ್ರೇಮಾ ತುಖಾರಾಮ ಕಾಂಬಳೆ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಮಹೇಶ ಬಾಬು ಕಾಂಬಳೆ ಅವರ ಅವಿಶ್ವಾಸ ಮಂಡನೆ ಮಾಡುವ ಮೂಲಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪ್ರೇಮಾ ತುಖಾರಾಮ ಕಾಂಬಳೆ ಹಾಗೂ ಹೌಸವ್ವ ಶಂಕರ ಕಾಂಬಳೆ ಮಧ್ಯ ಪೈಪೋಟಿ ನಡೆದು ಒಟ್ಟು 15 ಸದಸ್ಯರುಗಳಿದ್ದು, ಇದರಲ್ಲಿ 14 ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡು 11ಸದಸ್ಯರು ಪ್ರೇಮಾ ಕಾಂಬಳೆಯವರಿಗೆ ಬೆಂಬಲ ಸೂಚಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿಪಂ ವೀರಣ್ಣಾ ವಾಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಬಳಿಕ ಅಧ್ಯಕ್ಷ ಪ್ರೇಮಾ ಕಾಂಬಳೆ ಯವರಿಗೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸತ್ಕರಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ನೂತನ ಗ್ರಾಪಂ ಅಧ್ಯಕ್ಷರಾದ ಪ್ರೇಮಾ ಕಾಂಬಳೆ ಅವರು ನನ್ನನ್ನು ಈ ಗ್ರಾಪಂಗೆ ಅಧ್ಯಕ್ಷನ್ನಾಗಿ ಆಯ್ಕೆಮಾಡಿದ ಎಲ್ಲ ಸದಸ್ಯರಿಗೂ ಹಾಗೂ ಊರಿನ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಬರುವ ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮವನ್ನು ಅಭಿವೃದ್ಧಿಯತ್ತ ಸಾಗಿಸುವಲ್ಲಿ ಪ್ರಯತ್ನ ಮಾಡುತ್ತೇವೆ ಎಂದರು.