ಬೆಂಗಳೂರು: ಕೇಂದ್ರ ಸರ್ಕಾರದ ಆತ್ಮನಿರ್ಭರ ಬಜೆಟ್ ನಡಿ ಆತ್ಮನಿರ್ಭರ ಕೃಷಿಗೆ ಒತ್ತು ಕೊಡಲಾಗಿದ್ದು, ತಂತ್ರಜ್ಞಾನದ ನೆರವು ಕೊಡಲು ಉದ್ದೇಶಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯರು ಮತ್ತು ರೈತ ಮೋರ್ಚಾ ರಾಜ್ಯ ಅಧ್ಯಕ್ಷರಾದ ಈರಣ್ಣ ಕಡಾಡಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಇಂದು ಏರ್ಪಡಿಸಿದ್ದ ಸಿರಿಧಾನ್ಯಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಸಿರಿಧಾನ್ಯಗಳ ಮಹತ್ವ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕಾರ್ಯಾಗಾರ ಇದು. ಜಿಲ್ಲೆಯ ಪ್ರಮುಖ ಬೆಳೆಗೆ ಅನುಗುಣವಾಗಿ ಒಂದನ್ನು ಸರಕಾರಗಳೂ ಆಯ್ಕೆ ಮಾಡಿವೆ.
ಕೃಷಿಯನ್ನು ಉದ್ಯಮ ಎಂದು ಪರಿಗಣಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು. ಜನಸಂಘದ ಆರಂಭ ಕಾಲದಲ್ಲೇ ಸ್ವಾವಲಂಬಿ ಆತ್ಮನಿರ್ಭರ ದೇಶದ ಕಲ್ಪನೆ ಇತ್ತು. ಈಗ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ವಿವರಿಸಿದರು. –
ಕೇಂದ್ರ ಸರಕಾರವೂ ಈ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಪ್ರಕಟಿಸಿದೆ. ಸಿರಿಧಾನ್ಯ ಆರೋಗ್ಯಐಶ್ವರ್ಯ ನೀಡುತ್ತದೆ ಎಂಬುದನ್ನು ನಮ್ಮ ಹಿರಿಯರು ಮನಗಂಡಿದ್ದರು ಅದನ್ನು ಮತ್ತೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಕಿಸಾನ್ ಸಮ್ಮಾನ್, ಕೃಷಿ ಸಿಂಚಾಯಿ ಮತ್ತಿತರ ನಮ್ಮ ಸರಕಾರಗಳ ಯೋಜನೆಗಳ ವಿವರ ತಿಳಿದುಕೊಂಡು ಜನರಿಗೂ ತಿಳಿಸಿ ಎಂದು ಅವರು ಕಿವಿ ಮಾತು ಹೇಳಿದರು.