ಚಿಕ್ಕೋಡಿ : ನಾಡಹಬ್ಬಕ್ಕೆ ವಿರುದ್ಧವಾಗಿ ಕರಾಳ ದಿನವನ್ನು ಆಚರಿಸಲು ಮುಂದಾಗಿದ್ದ ಎಮ್ಇಎಸ್ ಪುಂಡರನ್ನು ಜಿಲ್ಲೆಯ ಗಡಿ ಪ್ರವೇಶಿಸುವ ಮುನ್ನವೇ ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸೇರಿದಂತೆ 50ಕ್ಕೂ ಹೆಚ್ಚು ಪುಂಡರನ್ನು ಪೊಲೀಸ್ ವಾಹನದಲ್ಲಿ ವಾಪಸ್ ಕಾಗಲ್‌ಗೆ ಕರೆದುಕೊಂಡು ಹೋಗಿದ್ದಾರೆ.
ಎಂಇಎಸ್ ಸಂಘಟನೆಗೆ ಪ್ರಚೋದನೆ ನೀಡಲು ರಾಜ್ಯಕ್ಕೆ ಆಗಮಿಸಿ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿ ಗಡಿಯಲ್ಲೇ ಮುಖಭಂಗ ಅನುಭವಿಸಿ ವಾಪಸ್ ಆಗಿದ್ದಾರೆ.