ಬೆಳಗಾವಿ: ಎರಡನೇ ರಾಜ್ಯಧಾನಿ ಎಂದು ಕರೆಯುವ ಬೆಳಗಾವಿಯು ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ಈವರೆಗೆ ಪತ್ರಿಕಾ ಭವನ ಇರದೆ ಇರುವುದು ಬೇಸರದ ಸಂಗತಿಯಾಗಿದೆ ಕೂಡಲಿ ಪತ್ರಿಕಾ ಭವನ ನಿರ್ಮಿಸಿ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಜರ್ನಲ್ಲಿಸ್ಟ್ಸ್ ಯೂನಿಯನ್ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿಯು ಅತಿ ದೊಡ್ಡ ಜಿಲ್ಲೆಯಾಗಿದ್ದು ಜಿಲ್ಲೆಗೆ ಮಂತ್ರಿಗಳು ವಿಐಪಿಗಳು ಭೇಟಿ ಕೊಡುತ್ತಾರೆ. ಅಲ್ಲದೆ ಆಗಾಗ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಗಳು ಜರುಗುತ್ತವೆ.ಆದ್ದರಿಂದ ನಗರದ ಹೃದಯ ಭಾಗದಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡುವುದು ಅವಶ್ಯವಾಗಿದ್ದು ಚೆನ್ನಮ್ಮ ವೃತ್ತ ದಲ್ಲಿರುವ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ನಿರ್ಮಾಣ ಮಾಡಲು ಆಗ್ರಹಿಸಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಿಗೆ ಚಳಿಗಾಲ ಅಧಿವೇಶನ ಸಮಯದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದಿಂದ ಬೆಳಗಾವಿಯ ಜಿಲ್ಲಾಧ್ಯಕ್ಷರಾದ ಸತೀಶ್ ಗುಡಗೆನಟ್ಟಿ ಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. ಇವರಿಗೆ ಭವನದ ಅಡಿಗಲ್ಲ ಪೂಜೆಯಾದರೂ ಕೂಡ ಆಗದೇ ಇರುವುದು ಬೇಸರದ ಸಂಗತಿಯಾಗಿದೆ.
ಪತ್ರಿಕಾ ಭವನ ನಿರ್ಮಿಸುವುದಕ್ಕೆ ಈ ಹಿಂದಿನ ಜಿಲ್ಲಾಧಿಕಾರಿಗಳು 6 ಲಗುಂಟೆ ಕ್ಷೇತ್ರದ ಸರ್ಕಾರಿ ಆಸ್ತಿ ಸಿಟಿಎಸ್ ನಂಬರ್: 3930/1ಎ ನೆತ್ತರ ಪ್ರಾಪರ್ಟಿ ಕಾರ್ಡನ್ನು ಪರಿಶೀಲಿಸಲಾಗಿ ಸಿಟಿಎಸ್ ನಂಬರ್:3930 /1ಎ ಇದರ ಒಟ್ಟು ಕ್ಷೇತ್ರ 59471-6/9, ಚ.ಯಾರ್ಡ ಇದ್ದು ಇದರ ಪೈಕಿ ಸರ್ಕಾರದ ನಂಬರ್ ಎಲ್ಎಡಬ್ಲ್ಯೂ-195/ಎಲ್.ಸಿ.ಇ/80 ದಿ:22-04-1982 ರಂದು ಕನ್ನಡ ಸಾಹಿತ್ಯ ಪರಿಷತ್ ಇವರ ಹೆಸರು ದಾಖಲಾಗಿರುತ್ತದೆ.
ಈ ಹಿಂದೆ ಪತ್ರಕರ್ತರ ಸಂಘಗಳು ಮನವಿಗಳನ್ನ ಮಾಡಿದ ಹಾಗೆ 6 ಗುಂಟೆ ಜಾಗವನ್ನು ಮಂಜೂರು ಮಾಡುವಂತೆ ಅಂದಿನ ಜಿಲ್ಲಾಧಿಕಾರಿಗಳು ಕೋರಿ ಆದೇಶ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಸಿಟಿಎಸ್ ನಂಬರ್ 3930/1ಎ ಚೆನ್ನಮ್ಮ ವೃತ್ತದ ಹತ್ತಿರ ಕನ್ನಡ ಸಾಹಿತ್ಯ ಭವನದ ಹಿಂಭಾಗ ಜಾಗದ ಒಟ್ಟು 49535-46 ಚದರ್ ಮೀಟರ್ ಪೈ 6 ಗುಂಟೆ (607.05 ಚ.ಮೀ.) ಜಾಗವನ್ನು ಪತ್ರಿಕಾ ಭವನ್ ನಿರ್ಮಾಣಕ್ಕಾಗಿ ವಾರ್ತಾ ಮತ್ತು ಪ್ರಚಾರ ಇಲಾಖೆಯವರಿಗೆ ಸರಕಾರದ ಸುತ್ತೋಲೆ ಸಮ:ಆರ್ ಡಿ-11/ಎಲ್ ಜಿಡಬ್ಲೂ / 71 ದಿ:20.05.1971 ರೆಡಿ ಜಾಗೆ ವರ್ಗಾಯಿಸಿದೆ .
ಪ್ರಸ್ತಾಪಿತ ಬೆಳಗಾವಿ ನಗರದ ಸಿಟಿಎಸ್ ನಂ 3930/1ಎ ಚೆನ್ನಮ್ಮ ವೃತ್ತದ ಹತ್ತಿರ ಕನ್ನಡ ಸಾಹಿತ್ಯ ಭವನದ ಹಿಂಭಾಗ ಜಾಗದ ಒಟ್ಟು 49535- 46 ಚದರ ಮೀಟರ್ ಪೈಕಿ 06 ಗುಂಟೆ(607.05ಚ.ಮೀ) ಜಾಗಯ ಜಮೀನು ಚೆಕ್ ಬಂದಿ ಪೂರ್ವಕ್ಕೆ :ಸಿ.ಸ.ನಂ. 3930/1ಬಿ ಪಶ್ಚಿಮಕ್ಕೆ: ರಸ್ತೆಯು ಉತ್ತರಕ್ಕೆ: ಸಿ.ಸ.3930/1ಎ ರ ಪೈಕಿ ಜಾಗೆ ದಕ್ಷಿಣಕ್ಕೆ: ಸಿ.ಸ.ನಂ.3930/1ಎ ರ ಪೈಕಿ ಜಾಗೆ ಹೀಗೆ ಗುರುತಿಸಿ ಮ್ಯಾಪ್ ಅಳವಡಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರ ಹೆಸರಿಗೆ ನೊಂದಣಿ ಇದ್ದು ಪ್ರಕಾರ ಈ ಜಾಗವನ್ನು ಅತಿಕ್ರಮಣ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ತಾವು ಕನ್ನಡ ಸಾಹಿತ್ಯ ಭವನದ ಆವರಣದ ಕುಲ್ಲಾ ಜಾಗಿಯಲ್ಲಿ ವಾರ್ತಾ ಇಲಾಖೆ ಹೆಸರಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಜಾಗಯೂ ಮಂಜೂರು ಇದ್ದು ಮತ್ತು ಬೆಳಗಾವಿಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 25 ಲಕ್ಷ ರೂಪಾಯಿಗಳನ್ನು ಪತ್ರಿಕ ಭವನ ಕಟ್ಟಡ ನಿರ್ಮಾಣಕ್ಕಾಗಿ ಏಳು7 ಎಂಟು8 ವರ್ಷಗಳಿಂದ ಕಾಯದರಿಸಲಾಗಿದೆ.
ಆದ್ದರಿಂದ ಆದಷ್ಟು ಬೇಗನೆ ಪತ್ರಿಕಾ ಭವನ ಕಟ್ಟಡ ನಿರ್ಮಾಣ ಕಾರ್ಯವನ್ನು ಅಡಿಗಲ್ ಪೂಜೆಯಾದರೂ ನೆರವೇರಿಸಿ ಪ್ರಾರಂಭಿಸುವಂತೆ ಮನವಿ ಮೂಲಕ ಆಗ್ರಹಿಸಿದರು.