Ad imageAd image

ಮಾನಸಿಕ ಬೆಳವಣಿಗೆಯಿಂದ ವ್ಯಕ್ತಿತ್ವ ವಿಕಸನ : ಎಸ್.ಆರ್.ಮುಗನೂರಮಠ

ratnakar
ಮಾನಸಿಕ ಬೆಳವಣಿಗೆಯಿಂದ ವ್ಯಕ್ತಿತ್ವ ವಿಕಸನ : ಎಸ್.ಆರ್.ಮುಗನೂರಮಠ
WhatsApp Group Join Now
Telegram Group Join Now

ಬಾಗಲಕೋಟೆ : ಇಚ್ಛಾಶಕ್ತಿ ಕ್ರಿಯಾ ಶಕ್ತಿಗಳು ಸಕಾರಾತ್ಮಕವಾಗಿರುವುದರಿಂದ ಮಾನವನ ಮಾನಸಿಕ ಬೆಳವಣಿಗೆಯಾಗಿ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಹೇಳಿದರು.

ಅವರು ನಗರದ ಬಿ.ವಿ.ವಿ.ಸಂಘದ
ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ಅಭಿಜ್ಞಾನ್ 2024ರ ಅಡಿಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ತರಗತಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು,
ಭಾವನೆಗಳೇ ಇಲ್ಲದವನು ಪಶು ಸಮಾನ. ಭಾವನೆಗಳು ಮಾನವ ತನ್ನ ಜೀವನದ ಬಗ್ಗೆ ಕನಸು ಕಾಣಲು ಪ್ರೇರೆಪಿಸುತ್ತವೆ. ಸ್ವಪ್ನರಹಿತ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಭಾವನೆಗಳು ಜ್ಞಾನಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ, ವ್ಯಕ್ತಿತ್ವ ವಿಕಸನದಲ್ಲಿ ಮಾನಸಿಕ ಬೆಳವಣಿಗೆ ಪ್ರಮುಖಪಾತ್ರ ವಹಿಸುತ್ತದೆ. ಮನಸ್ಸು ವ್ಯಕ್ತಿತ್ವದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇಚ್ಛಾಶಕ್ತಿ ಕ್ರಿಯಾ ಶಕ್ತಿಗಳು ಸಕಾರಾತ್ಮಕವಾಗಿದ್ದಲ್ಲಿ
ಮನಸ್ಸು ಸದಾ ಉತ್ಸಾಹಭರಿತವಾಗಿರುತ್ತದೆ. ಎಲ್ಲ ಬಗೆಯ ನಂಬಿಕೆಗಳು ಮನಸ್ಸನ್ನಾಧರಿಸಿರುತ್ತವೆ. ಮಾನಸಿಕವಾಗಿ ಅತಿ ಎತ್ತರಕ್ಕೆ ಬೆಳೆಯಲಾಗದಿದ್ದರೂ ಎಲ್ಲರ ಮನಸ್ಸಿಗೆ ಹತ್ತಿರವಾಗಿ ಬೆಳೆಯಬೇಕು. ಮನಸ್ಸನ್ನು ಕೆರಳಿಸಬಾರದು ಆದರೆ ಅರಳಿಸಬೇಕು. ಮನಸ್ಸನ್ನು ಅರಳಿಸಿ-ಪಳಗಿಸಿದರೆ, ಸುಖ-ದುಃಖಗಳಲ್ಲಿ ಸಮತೆಯನ್ನು ಹೊಂದಿ ಎಲ್ಲ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂದು ನುಡಿದರು.
ಬಿ.ಬಿ.ಎ ವಿಭಾಗದ ಸಂಯೋಜಕರಾದ ಡಾ.ಎಂ.ನಂಜುಂಡಸ್ವಾಮಿ ಅವರು ವಿದ್ಯಾರ್ಥಿಗಳು ಉದ್ದೇಶಿಸಿ ಜೀವನದ ಪ್ರತಿ ಹಂತದಲ್ಲಿ ಕಲಿಕೆ ಹೆಚ್ಚಿಸಿಕೊಳ್ಳುತ್ತಾ ಯಾವುದಕ್ಕೆ ಪ್ರಾಧಾನ್ಯತೆ ಕೊಡಬೇಕು ಎಂಬುದನ್ನು ಅರಿತು ಅದಕ್ಕೆ ಆದ್ಯತೆ ಕೊಟ್ಟಾಗ ವ್ಯಕ್ತಿತ್ವ ವಿಕಾಸ ಆಗುತ್ತದೆ ಅದಕ್ಕೆ ಪ್ರತಿಯೊಬ್ಬರೂ ತಮ್ಮಲ್ಲಿನ ಆತ್ಮವಿಶ್ವಾಸ ಸ್ವಾಭಿಮಾನ ಹಾಗೂ ಸೃಜನಶೀಲತೆಯನ್ನು ಬಳಸಿ ಬೆಳೆಸಿಕೊಂಡಾಗ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಗನ್ನಾಥ ವ್ಹಿ.ಚವ್ಹಾಣ ವಹಿಸಿಕೊಂಡಿದ್ದರು. ರಾಜೇಶ್ವರಿ ಅಯ್ಯನಗೌಡರ ಸ್ವಾಗತಿಸಿದರು. ಬಿ.ಬಿ.ಎ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಿನಿ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಅಲ್ಫಿಯಾ ಪ್ರಾರ್ಥಿಸಿದರು. ಕುಮಾರಿ ರಂಜಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರಾಗಿ ಶೀತಲ್ ವಿ. ಬಾರ್ಶಿ, ಗುರಮ್ಮ ಜಿ. ಬಳೆಗಾರ, ವೈಷ್ಣವಿ ವಿ. ಹಂದ್ರಾಳ ಹಾಗೂ ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೋಟೋ ೦೧ ವ್ಯಕ್ತಿತ್ವ ವಿಕಸನದ ತರಗತಿಗಳ ಉದ್ಘಾಟನೆ

WhatsApp Group Join Now
Telegram Group Join Now
Share This Article