Ad imageAd image

ಸಂವಹನ ಕೌಶಲ್ಯದಿಂದ ವ್ಯಕ್ತಿತ್ವ ನಿರ್ಮಾಣ: ಹೋಲಿಮಠ

ratnakar
ಸಂವಹನ ಕೌಶಲ್ಯದಿಂದ ವ್ಯಕ್ತಿತ್ವ ನಿರ್ಮಾಣ: ಹೋಲಿಮಠ
WhatsApp Group Join Now
Telegram Group Join Now

ಬಾಗಲಕೋಟೆ (11): ಹುಟ್ಟಿದ ಮಗುವಿಗೆ ನೀಡುವ ಸಂಸ್ಕಾರವೇ ವ್ಯಕ್ತಿತ್ವವಾಗಿದ್ದು ಸಂವಹನ ಕೌಶಲ್ಯ ಮತ್ತು ಆನುವಂಶಿಯತೆಯೂ ಕೂಡ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ ಎಂದು ಕಲಾದಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಮಹಾಂತೇಶ ಹೋಲಿಮಠ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ, ಸಮಾಜಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡ ವ್ಯಕ್ತಿತ್ವ ಅಭಿವೃದ್ಧಿ ಮತ್ತು ಸಂವಹನ ವಿಷಯದ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕೊರತೆಯ ಮಧ್ಯೆಯು ನಮ್ಮ ತನವನ್ನು ಮೆರೆಯುವುದೇ ವ್ಯಕ್ತಿತ್ವ. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿರಬೇಕು. ಒಂದೇ ವಿಷಯದಿಂದ ವ್ಯಕ್ತಿತ್ವ ರೂಪಗೊಳ್ಳುವುದಿಲ್ಲ. ಸಾಮಾಜಿಕ, ಮಾನಸಿಕ, ಬೌದ್ಧಿಕ ಅಂಶಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕ ಎಂದರು.

ಸಂವಹನ ಕೌಶಲ್ಯದಲ್ಲಿ ಪ್ರಾವಿಣ್ಯತೆ ಬೆಳೆಸಿಕೊಳ್ಳಬೇಕು. ಕ್ರಿಯೆ ಮತ್ತು ಪ್ರತಿಕ್ರಿಯೆ ಸಂವಹನಕ್ಕೆ ಅವಶ್ಯ. ಯಾರೊಂದಿಗೆ ಹೇಗೆ ವರ್ತಿಸಬೇಕು ಅನ್ನೋದು ಮುಖ್ಯ. ಅವಕಾಶಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಅರಿತುಕೊಳ್ಳಿ ಭವಿಷ್ಯದ ಜೀವನವನ್ನು ಬಂಗಾರವಾಗಿಸಲು ವಿದ್ಯಾರ್ಥಿಗಜೀವನ ಉತ್ತಮ ವೇದಿಕೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್. ಆರ್. ಮೂಗನೂರಮಠ ಅವರು ಮಾತನಾಡಿ ವಿದ್ಯಾರ್ಥಿಗಳು ಮಾತನಾಡುವುದನ್ನು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಮಾತು ಮೆದುಳಿನಿಂದ ಬರಬೇಕು, ಮಾತಿನ ರೀತಿ ಸಂದರ್ಭಕ್ಕೆ ತಕ್ಕಂತೆ ಇರಬೇಕು. ಮತ್ತೊಬ್ಬರೊಂದಿಗೆ ಮಾತನಾಡುವಾಗ ಪ್ರಜ್ಞೆ ಇರಲಿ. ದೌರ್ಬಲ್ಯಗಳನ್ನು ಮೆಟ್ಟಿ ಉದ್ಯೋಗದ ಮಾರುಕಟ್ಟೆಗೆ ನಮ್ಮನ್ನು ನಾವು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ. ಪಿ. ಬಡಿಗೇರ ಪ್ರಾಸ್ತವಿಕವಾಗಿ ಮಾತನಾಡಿದರು. ಐಕ್ಯೂಎಸ್‌ಸಿ ಸಂಯೋಜಕರಾದ ಡಾ. ಎ.ಯೂ ರಾಠೋಡ್, ಜ್ಯೋತಿ ದಿವಟೆ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article