ರಾಯಚೂರು: ಚಿಪ್ಸ್ ಪ್ಯಾಕೆಟ್ನಲ್ಲಿ 500 ರೂಪಾಯಿಯ ಗರಿ ಗರಿ ನೋಟು ಸಿಗುತ್ತದೆ ಅಂದರೆ ನೀವು ನಂಬುತ್ತೀರಾ?ನಂಬಲು ಅಸಾಧ್ಯವಾದರೂ ಇದು ಸತ್ಯವಾಗಿದೆ.
ಹೌದು, ಕುರ್ಕುರೆ ಖರೀದಿ ಮಾಡಿ ಸುಮಾರು 20 ಸಾವಿರಕ್ಕೂ ಹೆಚ್ಚು ಹಣವನ್ನು ರಾಯಚೂರು ಜಿಲ್ಲೆಯ ಜನ ಪಡೆದಿದ್ದಾರೆ. ಜಿಲ್ಲೆಯ ಲಿಂಗಸಗೂರು ತಾಲೂಕಿನ ಹನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕುರ್ಕುರೆ ಪ್ಯಾಕೆಟ್ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದಾರೆ.
5 ರೂಪಾಯಿ ಕುರ್ಕುರೆ ಪ್ಯಾಕೆಟ್ನಲ್ಲಿ 500 ರೂ. ಬಂದಿದ್ದನ್ನು ಕಂಡು ಜನ ಸಂತಸಗೊಂಡಿದ್ದಾರೆ. ಫ್ಲಿಂಗ್ಸ್ ಪಂಜಾಬ್ ತಡ್ಕಾ ಹೆಸರಿನ ಕುರ್ಕುರೆ ಬ್ರಾಂಡ್ನ ಪ್ಯಾಕೆಟ್ನಲ್ಲಿ ಹಣ ಪತ್ತೆಯಾಗಿದೆ.
ಬಹುಶಃ ತಮ್ಮ ಉತ್ಪನ್ನದ ಜಾಹಿರಾತು ಹಾಗೂ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಕಂಪನಿಯೇ ಪ್ಯಾಕೆಟ್ನಲ್ಲಿ ಹಣವಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಖಚಿತ ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ. ತನಿಖೆಯ ಬಳಿಕವಷ್ಟೇ ಈ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ.