spot_img
spot_img
spot_img
21.1 C
Belagavi
Friday, September 30, 2022
spot_img

ಸುಳಗಾ ಮಹಿಳೆಯರಿಂದ ಉದ್ಯೋಗ ಕಸಿದ ಪಿಡಿಒ: ತಕ್ಷಣ ಕ್ರಮಕ್ಕೆ ಶಾಸಕಿ  ಹೆಬ್ಬಾಳಕರ್ ಸೂಚನೆ

spot_img

ವರದಿ : ರತ್ನಾಕರ್ ಗೌಂಡಿ

ಬೆಳಗಾವಿ  : ತಮಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಲಾಗುತ್ತಿಲ್ಲ ಎಂದು ಸುಳಗಾ (ವೈ) ಗ್ರಾಮದ ನೂರಾರು ಮಹಿಳೆಯರು ಶನಿವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಬಳಿ ಬಂದು ಅಳಲನ್ನು ತೋಡಿಕೊಂಡರು.ತಮಗೆ ಈ ವರ್ಷ ಆರಂಭದಿಂದಲೂ ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುತ್ತಿಲ್ಲ. ಕೂಲಿ ಇಲ್ಲದೆ ಸಂಕಷ್ಟಕ್ಕೀಡಾಗಿದ್ದೇವೆ ಎಂದು ಮಹಿಳೆಯರು ವಿವರಿಸಿದರು.

ತಕ್ಷಣ ಸ್ಪಂದಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ದೂರವಾಣಿಯಲ್ಲಿ ವಿಚಾರಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವಯಕ್ತಿಕ ಕಾರಣಗಳಿಗಾಗಿ ಮಹಿಳೆಯರಿಗೆ ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ ನೀಡದಿರುವ ವಿಷಯ ಬಯಲಾಯಿತು.

ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶಾಸಕಿ ಹೆಬ್ಬಾಳಕರ್ ತಕ್ಷಣವೇ ಮಹಿಳೆಯರಿಗೆ ಉದ್ಯೋಗ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.ನಂತರ ಮಹಿಳೆಯರಿಗೆ ಧೈರ್ಯ ತುಂಬಿದ ಶಾಸಕಿ, ಇನ್ನು ಮುಂದೆ ನಿಮಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ. ಯಾವುದೇ ಸಮಸ್ಯೆ ಬಂದರೂ ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.

spot_img

Related News

ಇಂದು ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ

ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಬರಮಾಡಿಕೊಳ್ಳಲು ಕಾಂಗ್ರೆಸ್ ತಯಾರಿ ಜೋರಾಗಿದೆ. ನಾಯಕರನ್ನು ಸ್ವಾಗತಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಸರ್ವ ರೀತಿಯಲ್ಲೂ...

ಪ್ರತಿ ಇನ್ಸಸ್ಟಾಗ್ರಾಂ ಪೋಸ್ಟ್ ಗೆ 8 ಕೋಟಿ ರೂ. ಪಡೆಯುವ ವಿರಾಟ್ ಕೊಹ್ಲಿ

ನವದೆಹಲಿ: ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅವರು ಪ್ರತಿ ಪ್ರಾಯೋಜಿತ ಪೋಸ್ಟ್​ಗೆ ಬರೋಬ್ಬರಿ 8 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಿದ್ದಾರೆ. ಈ ಮೂಲಕ ಇನ್​ಸ್ಟಾಗ್ರಾಂನಲ್ಲಿ ಗರಿಷ್ಠ ಹಣ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -