spot_img
spot_img
spot_img
34.1 C
Belagavi
Monday, May 29, 2023
spot_img

ಕಾಂಗ್ರೆಸ್ ‘ನಿಂದ ಪೇ-ಸಿಎಂ ಅಭಿಯಾನ : ಬಿಜೆಪಿಯಿಂದಲೂ ತೀರುಗೇಟು

ಬೆಂಗಳೂರು: ಬೆಂಗಳೂರಿನ ಹಲವೆಡೆ ಪೇ-ಸಿಎಂ ಪೋಸ್ಟರ್ ಅಂಟಿಸುವ ಮೂಲಕ ರಾಜ್ಯ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದ್ದು, ಸರ್ಕಾರದ ವಿರುದ್ಧ 40 % ಪರ್ಸೆಂಟ್​ ಕಮಿಷನ್​​ ಆರೋಪದ ಈ ರೀತಿಯ ಪ್ರಚಾರ ನಡೆಸಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.40ರಷ್ಟು ಕಮಿಷನ್ ಇಲ್ಲದೆ ಕೆಲಸ ಆಗುವುದೇ ಇಲ್ಲ ಎಂದು ಆರೋಪಿಸಿ ನಿರಂತರ ಹೋರಾಟ ನಡೆಸಿರುವ ಕಾಂಗ್ರೆಸ್ ಪಕ್ಷ ಪೇ-ಸಿಎಂ ನ್ನು ಅಭಿಯಾನ ಆರಂಭಿಸಿ ಇನ್ನೊಂದು ಹಂತದ ಹೋರಾಟದ ಅಸ್ತ್ರ ಪ್ರಯೋಗಿಸಿದೆ.

ಇಂದು ಬೆಂಗಳೂರು ನಗರದಾದ್ಯಂತ ಕ್ಯೂಆರ್ ಕೋಡ್‌ನೊಂದಿಗೆ ಪೇ-ಸಿಎಂ ಪೋಸ್ಟರ್‌ಗಳು ಕಂಡು ಬಂದಿವೆ. ಮುಖ್ಯಮಂತ್ರಿ ಅವರ ಭಾವಚಿತ್ರವಿರುವ ಪೇ-ಸಿಎಂ ಶೀರ್ಷಿಕೆಯ ಪೋಸ್ಟರ್‌ಗಳನ್ನು ಬೆಂಗಳೂರು ನಗರದಾದ್ಯಂತ ಅಂಟಿಸಲಾಗಿದೆ. ಈ ಮೂಲಕ ಬಿಜೆಪಿ​​ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದೆ.

ಈ ಕ್ಯೂಆರ್ ಕೋಡ್​​ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಅದು ಬಳಕೆದಾರರನ್ನು ದೂರುಗಳಿಗಾಗಿ ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ 40% ಕಮಿಷನ್ ಸರ್ಕಾರ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.

ಸಾರ್ವಜನಿಕರು ನೇರವಾಗಿ ಈ ​​ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೇ ಸರ್ಕಾರದ ಭ್ರಷ್ಟಾಚಾರದ ಕುರಿತು ತಮ್ಮ ಅನಿಸಿಕೆಗಳನ್ನು ಸಹ ಹಂಚಿಕೊಳ್ಳಬಹುದಾಗಿದೆ.ಇನ್ನು ಈ ಅಭಿಯಾನ ಕೆಂಡವಾಗಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ವಿರುದ್ಧವೂ ಕ್ಯೂಆರ್ ಕೋಡ್‌ ಅಭಿಯಾನ 

ಬಿಜೆಪಿ ನಾಯಕರ ಗಮನಕ್ಕೆ ತಂದು ಪೋಸ್ಟರ್‌ ರಿಲೀಸ್‌ ಗೆ ಬಿಜೆಪಿ ಪ್ಲ್ಯಾನ್‌ ಮಾಡಲು ನಿರ್ಧರಿಸಿದೆ. ರಿಡೂ ಸಿದ್ದರಾಮಯ್ಯ, ಇಡಿ ಡಿ.ಕೆ ಶಿವಕುಮಾರ್‌ ಅಂತ ಬಿಜೆಪಿ ಪೋಸ್ಟರ್‌ ರೆಡಿ ಮಾಡಿದೆ. ಇದರಲ್ಲಿ ಕಾಂಗ್ರೆಸ್‌ ಗಂಜಿ ಗಿರಾಕಿಗಳಿಂದ ದೂರವಿರಿ ಎಂದು ಅಭಿಯಾನ ಪ್ರಾರಂಭಿಸಲು ಬಿಜೆಪಿ ನಿರ್ಧಾರಿಸಿದೆ.

 

ಸ್ಕ್ಯಾನ್ ಕೋಡ್ ಮೇಲೆ ಸಿದ್ದರಾಮಯ್ಯ, ಡಿಕೆಶಿ ಚಿತ್ರ ಹಾಕಿ, ರಾಜ್ಯ ಲೂಟಿ ಮಾಡಿದ ಈ ಭ್ರಷ್ಟ ಜೋಡಿಯನ್ನು ರಾಜ್ಯದಿಂದ ಕಿತ್ತೆಸೆಯಲು ಇದನ್ನು ಸ್ಕ್ಯಾನ್ ಮಾಡಿ ಅಂತ ಟಾಂಗ್ ನೀಡಿದೆ.

ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ ಎಂದು ಅಭಿಯಾನ ಮಾಡಲು ಸಿದ್ಧತೆ ನಡೆಸಿದೆ. ಹಿರಿಯ ನಾಯಕರ ಗಮನಕ್ಕೆ ತಂದು ಅಭಿಯಾನ ನಡೆಸಲು ಮುಂದಾಗಿದೆ.

ಪೋಸ್ಟರ್ ಅಂಟಿಸಿದವರ ವಿರುದ್ಧ ದೂರು 

ಇನ್ನು ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ PAY CM ಎಂಬ ಬೆಂಗಳೂರಿನಲ್ಲಿ ಅಂಟಿಸಿರುವ ಪೋಸ್ಟರ್ ಕುರಿತಂತೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ PAY CM ಪೋಸ್ಟರ್‌ ಗಳನ್ನು ಸಿಎಂ , ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸ ಮುಂದೆ ಹಾಗೂ ರಸ್ತೆಗಳಲ್ಲಿ ಪೋಸ್ಟರ್‌ ಹಾಕಲಾಗಿತ್ತು. ಸಿಎಂ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಬಿಬಿಎಂಪಿ ಸಿಬ್ಬಂದಿ, ಪೊಲೀಸರಿಂದ ತೆರವು ಮಾಡಲಾಗಿದೆ.

Related News

ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ವಂದೇ ಭಾರತ್ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಅಸ್ಸಾಂನ ಗುವಾಹಟಿಗೆ ಹೊರಟಿದೆ. ಈ...

ಮಣಿಪುರದಲ್ಲಿ ಮತ್ತೆ ತಲೆ ಎತ್ತಿದ ಹಿಂಸಾಚಾರ ಪೊಲೀಸ್‌ ಸೇರಿದಂತೆ ಐವರು ಸಾವು

ಇಂಫಾಲ್‌: ಕಳೆದ ಕೆಲವು ದಿನಗಳಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾನುವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್‌ ಸೇರಿದಂತೆ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಕಳೆದ ಒಂದು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -