ಬೆಂಗಳೂರು: ಮಾರ್ಚ್ 12ಕ್ಕೆ ಎಲ್ಲ ರೈತರಿಗೂ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತದೆ. ಮಾರ್ಚ್ 12ಕ್ಕೆ ಈ ಯೋಜನೆಗೆ ಚಾಲನೆ ನೀಡಲಿದ್ದು, ಬರೋಬ್ಬರಿ 45 ಲಕ್ಷ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನ ಪರಿಷತ್’ನ ಪ್ರಶ್ನೋತ್ತರ ಕಲಾಪದಲ್ಲಿ MLC ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಆರ್.ಅಶೋಕ್, ರಾಜ್ಯದಲ್ಲಿ 700ಕ್ಕೂ ಹೆಚ್ಚು ಜನಸೇವಾ ಕೇಂದ್ರಗಳಿಂದ ರೈತರಿಗೆ ಪಹಣಿ, ಮ್ಯುಟೇಷನ್ ಸೇರಿ ವಿವಿಧ ಸೇವೆ ಕೊಡಲಾಗುತ್ತಿದೆ. ಕನಿಷ್ಠ ವೆಚ್ಚವಾಗಿ 15 ರೂ. ಶುಲ್ಕ ಪಡೆಯಲಾಗುತ್ತಿದೆ.
ಪಹಣಿ, ಮ್ಯುಟೇಷನ್ ಇತ್ಯಾದಿ ಸೇವೆಗಳಿಗೆ ಮಾತ್ರ ಶುಲ್ಕ ಪಡೆಯಲಾಗುತ್ತದೆ ಉತ್ತರಿಸಿದರು. ವೆಚ್ಚ ನಿಭಾಯಿಸಲು ಶುಲ್ಕ ಪಡೆಯುವುದು ಅನಿವಾರ್ಯವಾಗಿದೆ, ಆದರೆ, ಇದೇ ತಿಂಗಳು 12ರಂದು ಪಹಣಿ, ಜಾತಿ & ಆದಾಯ ಪ್ರಮಾಣಪತ್ರವನ್ನು ಲಕೋಟೆಯಲ್ಲಿ ಹಾಕಿ ಬರೋಬ್ಬರಿ 45 ಲಕ್ಷ ರೈತರ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ ಎಂದರು.
ಇದು ಸಂಪೂರ್ಣ ಉಚಿತವಾಗಿ ಇರಲಿದೆ ಎಂದು ತಿಳಿಸಿದರು. ಈ ಯೋಜನೆಯೂ ಪ್ರತಿ ಐದು ವರ್ಷಕ್ಕೊಮ್ಮೆ ರೈತರಿಗೆ ಉಚಿತವಾಗಿ ಕೊಡಬೇಕು ಎಂದು ಕಾನೂನಿನಲ್ಲೇ ಇದೆ. ಜಿಲ್ಲಾಧಿಕಾರಿಗಳು, ಎಸಿ, ತಹಶೀಲ್ದಾರರು ಮೂಲಕ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ ಮುಖ್ಯಮುಂತ್ರಿ , ಶಾಸಕರು ಭಾಗವಹಿಸಲಿದ್ದಾರೆ ಎಂದು ಉತ್ತರಿಸಿದರು.