Ad imageAd image

ಪೇಜರ್‌ ಆಯ್ತು ಈಗ ಹಿಜ್ಬುಲ್ಲಾ ಘಟಕಗಳಲ್ಲಿ ವಾಕಿಟಾಕಿಗಳ ಸ್ಫೋಟ – 14 ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ

ratnakar
ಪೇಜರ್‌ ಆಯ್ತು ಈಗ ಹಿಜ್ಬುಲ್ಲಾ ಘಟಕಗಳಲ್ಲಿ ವಾಕಿಟಾಕಿಗಳ ಸ್ಫೋಟ – 14 ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ
WhatsApp Group Join Now
Telegram Group Join Now

ಬೈರುತ್‌: ಸಾವಿರಾರು ಪೇಜರ್‌ಗಳ ಸ್ಫೋಟ ಬೆನ್ನಲ್ಲೇ ಲೆಬನಾನ್‌ (Lebanon) ಟಾರ್ಗೆಟ್‌ ಎದುರಿಸಿದೆ. ಲೆಬನಾನ್‌ನಾದ್ಯಂತ ಹಿಜ್ಬುಲ್ಲಾ (Hezbollah) ಭದ್ರಕೋಟೆಗಳಲ್ಲಿ ವಾಕಿ-ಟಾಕಿಗಳು ಸ್ಫೋಟಗೊಂಡಿದ್ದು, ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಧ್ಯಪ್ರಾಚ್ಯ ದೇಶದಾದ್ಯಂತ ಪೇಜರ್‌ಗಳು ಸ್ಫೋಟಗೊಂಡು 12 ಜನರು ಮೃತಪಟ್ಟು, ಸುಮಾರು 3,000 ಜನರು ಗಾಯಗೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಎಷ್ಟು ವಾಕಿ-ಟಾಕಿಗಳು (Walkie-Talkies) ಸ್ಫೋಟಗೊಂಡವು ಎಂಬುದು ತಿಳಿದು ಬಂದಿಲ್ಲ. ಆದರೆ ಎಣಿಕೆಯು ನೂರಾರು ಎಂದು ಅಂದಾಜಿಸಲಾಗಿದೆ. ಪೂರ್ವ ಲೆಬನಾನ್‌ನ ವಿವಿಧ ಸ್ಥಳಗಳಲ್ಲಿ ಸ್ಥಿರ ದೂರವಾಣಿಗಳು ಸಹ ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.

ಕೈಯಲ್ಲಿ ಹಿಡಿದಿರುವ ವೈರ್‌ಲೆಸ್ ರೇಡಿಯೊ ಸಾಧನಗಳು ಅಥವಾ ವಾಕಿ-ಟಾಕಿಗಳನ್ನು ಸುಮಾರು ಐದು ತಿಂಗಳ ಹಿಂದೆ ಖರೀದಿಸಲಾಗಿದೆ. ಅದೇ ಸಮಯದಲ್ಲಿ ಪೇಜರ್‌ಗಳನ್ನು ಖರೀದಿಸಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Share This Article