ಬೆಳಗಾವಿ: ಇತ್ತಿಚೆಗೆ ಐಎಎಸ್ ಮತ್ತು ಐಪಿಎಸ್ ಆಗಿ ಬಡ್ತಿ ಹೊಂದಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಹಾಗೂ ಮಹಾನಿಂಗ್ ನಂದಗಾವಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ್ ನಂದಗಾವಿ ಅವರಿಗೆ ಹಾಲಿ ಹುದ್ದೆಗಳಲ್ಲಿಯೇ ಮುಂದುವರಿಯುವಂತೆ ರಾಜ್ಯ ಸರಕಾರ ಆದೇಶಿಸಿದೆ.
ಹಿರಿಯ ಕೆಎಎಸ್ ಅಧಿಕಾರಿಯಾಗಿದ್ದ ಪ್ರವೀಣ ಬಾಗೇವಾಡಿ ಮತ್ತು ಕೆಎಸ್‌ಪಿ ಅಧಿಕಾರಿ ಮಹಾನಿಂಗ್ ನಂದಗಾವಿ ಅವರಿಗೆ ರಾಜ್ಯ ಸರಕಾರ ಬಡ್ತಿ ನೀಡಿತ್ತು.