spot_img
spot_img
spot_img
spot_img
spot_img
spot_img
spot_img
spot_img
21.5 C
Belagavi
Friday, September 29, 2023
spot_img

ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಲು ಆದೇಶ

ಬೆಂಗಳೂರು: ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಮೊದಲನೆಯ ಅವದಿ ಪೂರ್ಣಗೊಂಡಿದ್ದು ಎರಡನೆ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿ ಪಡಿಸಲು ರಾಜ್ಯಚುನಾವಣಾ ಆಯೋಗ ನಿರ್ದೇಶನ ನೀಡಿದ್ದು ತಾಲ್ಲೂಕುವಾರು  ಮೀಸಲಾತಿಯನ್ನು ನಿಗದಿ ಪಡಿಸಲು ದಿನಾಂಕ ಮತ್ತು ಸಮಯವನ್ನು ನಿಗಧಿಪಡಿಸಿದೆ.

ತಾಲ್ಲೂಕುಗಳಲ್ಲಿ ಸಂಬಂಧಿಸಿದ ತಹಸಿಲ್ದಾರರು ಅವದಿಗೆ ಮುನ್ನ ಅವಶ್ಯವಿರುವ ಪೂರ್ವತಯಾರಿಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು ಜೂನ ತಿಂಗಳ ಅಂತ್ಯದೊಳಗೆ ಮೀಸಲಾತಿಯನ್ನು ನಿಗದಿಯಾಗಲಿದೆ.

ಮೀಸಲಾತಿಯನ್ನು ನಿಗದಿ ಪಡಿಸಿದ ದಿನಾಂಕ

ಅಥಣಿ                : 09/06/2023

ಕಾಗವಾಡ            : 09/06/2023

ರಾಯಬಾಗ          : 12/06/2023

ಮೂಡಲಗಿ           : 12/06/2023

ಗೋಕಾಕ             : 15/06/2023

ಹುಕ್ಕೇರಿ              : 15/06/2023

ಬೈಲಹೊಂಗಲ್     : 16/06/2023

ಸವದತ್ತಿ              : 16/06/2023

ಯರಗಟ್ಟಿ            : 17/06/2013

ರಾಮದುರ್ಗ         : 17/06/2013

ಖಾನಾಪುರ           : 19/06/2023

ಕಿತ್ತೂರ               : 19/06/2023

ಬೆಳಗಾವಿ              : 20/06/2023

ನಿಪ್ಪಾಣಿ              : 21/06/2023

ಚಿಕ್ಕೋಡಿ                        : 21/06/2023

 

ಪಂಚಾಯತ್ ರಾಜ್ ಅಧಿನಿಯಮದಲ್ಲಿ ಏನಿದೆ:

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44(2)ರ ಪ್ರಕಾರ, ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು ಪಂಚಾಯಿತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸಬೇಕಾಗಿರುತ್ತದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ಪಂಚಾಯಿತಿವಾರು ನಿಗದಿಪಡಿಸುವಾಗ ಪ್ರಕರಣ 44ರ ವಿವರಣೆಯಲ್ಲಿರುವಂತೆ, ಸರದಿಯಂತೆ 1993ನೇ ಸಾಲಿನಲ್ಲಿ ಚುನಾವಣೆ ನಡೆದ ನಂತರದ ಮೊದಲ ಮೀಸಲಾತಿ ಹಾಗೂ 2000ನೇ ಸಾಲಿನ ಚುನಾವಣೆಗಳ ನಂತರ ನಡೆದ ಎರಡು ಅವಧಿಗಳ ಮೀಸಲಾತಿ ಹಾಗೂ 2005ನೇ ಸಾಲಿನ ಚುನಾವಣೆ ನಂತರ ನಡೆದ ಎರಡು ಅವಧಿಗಳ ಮೀಸಲಾತಿ, 2010ನೇ ಸಾಲಿನ ಚುನಾವಣೆ ನಂತರ ನಡೆದ ಎರಡು ಅವಧಿಗಳ ಹಾಗೂ 2015ನೇ ಸಾಲಿನ ಚುನಾವಣೆ ನಂತರ ನಡೆದ 5 ವರ್ಷಗಳ ಒಂದು ಅವಧಿಯ, 2020ನೇ ಸಾಲಿನ ಚುನಾವಣೆ ನಂತರ ನಡೆದ ಮೊದಲನೇ ಅವಧಿಯ ನಿಗದಿಪಡಿಸಿದ ಮೀಸಲಾತಿಗಳನ್ನು ಪರಿಗಣಿಸಿ 2020ನೇ ಸಾಲಿನ ಚುನಾವಣೆ ನಂತರದ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವುದು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44ರ ಉಪ ಪ್ರಕರಣ 2(ಎ)ರನ್ವಯ, ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೊಳಪಟ್ಟು ಜಿಲ್ಲಾಧಿಕಾರಿಗಳು “ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ, ರಾಜ್ಯದಲ್ಲಿರುವ ಅನುಸೂಚಿತ ಜಾತಿಗಳ ಜನಸಂಖ್ಯೆಯು ಅಥವಾ ರಾಜ್ಯದಲ್ಲಿರುವ ಅನುಸೂಚಿತ ಪಂಗಡಗಳ ಜನಸಂಖ್ಯೆಯು ಅನುಪಾತದಲ್ಲಿದೆಯೋ ಅಂತಹ ಹುದ್ದೆಗಳ ಸಂಖ್ಯೆಯು ರಾಜ್ಯದಲ್ಲಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಸರಿ ಸುಮಾರು ಅದೇ ಅನುಪಾತದಲ್ಲಿರತಕ್ಕದ್ದು” ಎಂದಿರುತ್ತದೆ.

ಹುದ್ದೆಗಳನ್ನು ಮೀಸಲಿರಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಒಟ್ಟು ಹುದ್ದೆಗಳ ಸಂಖ್ಯೆಯಲ್ಲಿ ಮಹಿಳಾ ಮೀಸಲು ಹುದ್ದೆಗಳು ಅರ್ಧಕ್ಕಿಂತ (50%) ಹೆಚ್ಚು ಬಂದಲ್ಲಿ, ಅಂತಹ ಹೆಚ್ಚುವರಿ ಮಹಿಳಾ ಹುದ್ದೆಯನ್ನು “ಸಾಮಾನ್ಯ ವರ್ಗದ ಮಹಿಳೆಗೆ ನಿಗದಿಪಡಿಸಿರುವ ಹುದ್ದೆಯ ಸಂಖ್ಯೆಯಲ್ಲಿ ಕಡಿತಗೊಳಿಸಿ, ಆ ಹುದ್ದೆಯನ್ನು ಸಾಮಾನ್ಯ ವರ್ಗದ “ಸಾಮಾನ್ಯ” ಹುದ್ದೆಯಲ್ಲಿ ಹೆಚ್ಚಿಗೆ ಮಾಡಿ ಒಟ್ಟಾರೆ ತಾಲ್ಲೂಕಿನ ಒಟ್ಟು ಹುದ್ದೆಗಳ ಸಂಖ್ಯೆಯ ಅರ್ಧದಷ್ಟು ಪರಿಮಿತಿಗೆ ಮಹಿಳಾ ಹುದ್ದೆಗಳನ್ನು ಸೀಮಿತಗೊಳಿಸುವುದರ ಕುರಿತು ಅಧಿನಿಯಮ ಹೇಳುತ್ತಿದ್ದು ಅಧಿನಿಯಮಕ್ಕೆ ಅನುಸಾರವಾಗಿ ಮಿಸಲಾತಿ ನಿಗದಿಪಡಿಸಲು ಸೂಚಿಸಲಾಗಿದೆ.

Related News

ಬೆಳಗಾವಿಯಲ್ಲಿ ಅದ್ದೂರಿ ಗಣೇಶ ವಿಸರ್ಜನೆ

ಬೆಳಗಾವಿ: 10 ದಿನಗಳ ಗಣಪತಿ ಭಕ್ತರ ಆತಿತ್ಯವನ್ನು ಸ್ವೀಕರಿಸಿ ಇಂದು ನಿರ್ಗಮನ ವಾಗುತ್ತಿದ್ದಾನೆ. ಗಣಪತಿ ಭಕ್ತರು ಹತ್ತು ದಿನಗಳವರೆಗೆ ವಿವಿಧ ಸೇವೆ ಸಲ್ಲಿಸಿ ಗಣಪತಿಯ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ಬೆಳಗಾವಿ ನಗರಕ್ಕೆ ಗಣಪತಿ ಆಗಮನ...

ಹಾಕಿ ಆಸ್ಟ್ರೋಟರ್ಫ್ ಮೈದಾನಕ್ಕೆ ಬೇಡಿಕೆ ಜನತಾ ದರ್ಶನದಲ್ಲಿ ಹೇಳಿಕೆ: ಭರವಸೆ

ಬೆಳಗಾವಿ: ಭಾರತಕ್ಕೆ ನಾಲ್ವರು ಒಲಂಪಿಕ್ ಹಾಕಿ ಆಟಗಾರರನ್ನು ನೀಡಿದ್ದು, ಕರ್ನಾಟಕ ಸರಕಾರ ಬೆಳಗಾವಿಗೆ ಅಂತರಾಷ್ಟ್ರೀಯ ಗುಣಮಟ್ಟದ ಹಾಕಿ ಮೈದಾನವನ್ನು ಇನ್ನೂ ನೀಡಿಲ್ಲ, ಅದಕ್ಕಾಗಿ ಜಿಲ್ಲಾಡಳಿತ ಕೂಡಲೇ ಬೆಳಗಾವಿ ಹಾಕಿ ಸಂಸ್ಥೆಯ ಆಸ್ಟ್ರೋಟರ್ಫ್ ಮೈದಾನದ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -