Ad imageAd image

ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುತ್ತಾ ಬಿಜೆಪಿ ಮೈತ್ರಿಕೂಟ?; ಎಕ್ಸಿಟ್​ ಪೋಲ್​ನಲ್ಲಿ ಮಹಾಯುತಿಗೆ ಮುನ್ನಡೆ

ratnakar
ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುತ್ತಾ ಬಿಜೆಪಿ ಮೈತ್ರಿಕೂಟ?; ಎಕ್ಸಿಟ್​ ಪೋಲ್​ನಲ್ಲಿ ಮಹಾಯುತಿಗೆ ಮುನ್ನಡೆ
WhatsApp Group Join Now
Telegram Group Join Now

ನವದೆಹಲಿ: ಈಗಾಗಲೇ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ಎಕ್ಸಿಟ್ ಪೋಲ್ (ಚುನಾವಣೋತ್ತರ ಸಮೀಕ್ಷೆ) ಫಲಿತಾಂಶಗಳು ಹೊರಬಿದ್ದಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳಲ್ಲೂ ಮತದಾರರ ಒಲವು ಈ ಬಾರಿ ಕೂಡ ಮಹಾಯುತಿ ಪರವಾಗಿದೆ ಎಂದು ಸೂಚಿಸಿದೆ. ಹೀಗಾಗಿ, ಕಾಂಗ್ರೆಸ್​ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿಯನ್ನು ಹಿಂದಿಕ್ಕಿ ಬಿಜೆಪಿ ಮೈತ್ರಿಕೂಟ ಮಹಾಯುತಿ ಮತ್ತೊಮ್ಮೆ ಅಧಿಕಾರಕ್ಕೇರುವ ಸಾಧ್ಯತೆಗಳು ಹೆಚ್ಚಾಗಿವೆ.

ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಿತು. ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 288 ಆಗಿದ್ದು, ರಾಜ್ಯದಲ್ಲಿ ಸರ್ಕಾರ ರಚಿಸಲು ಪಕ್ಷ ಅಥವಾ ಮೈತ್ರಿಕೂಟವು ಪಡೆಯಬೇಕಾದ ಬಹುಮತದ ಸಂಖ್ಯೆ 145 ಆಗಿದೆ.

ಬಿಜೆಪಿ 149 ಸ್ಥಾನಗಳಲ್ಲಿ, ಶಿವಸೇನೆ 81 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಿರೋಧ ಪಕ್ಷದ ಮೈತ್ರಿಯಲ್ಲಿ ಕಾಂಗ್ರೆಸ್ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಶಿವಸೇನೆ (ಯುಬಿಟಿ) 95, ಮತ್ತು ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿವೆ. ಪ್ರತಿಪಕ್ಷ ಮಹಾವಿಕಾಸ್ ಅಘಾಡಿ (ಎಂವಿಎ)ಯಲ್ಲಿ ಕಾಂಗ್ರೆಸ್, ಶಿವಸೇನೆ (UBT), ಮತ್ತು NCP (ಶರದ್ ಪವಾರ್ ಬಣ) ಸೇರಿದೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಲಿದೆ ಎಂಬ ಬಗ್ಗೆ ನಡೆದ ಎಕ್ಸಿಟ್ ಪೋಲ್ ಫಲಿತಾಂಶ ಇಲ್ಲಿದೆ.

ಪಿ-ಮಾರ್ಕ್ ಎಕ್ಸಿಟ್ ಪೋಲ್:

ಪಿ-ಮಾರ್ಕ್ ಸಮೀಕ್ಷೆ ಪ್ರಕಾರ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ.

ಬಿಜೆಪಿ: 137-157

ಕಾಂಗ್ರೆಸ್: 126-146

ಇತರರು: 2-8

ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಸಮೀಕ್ಷೆ:

ಮ್ಯಾಟ್ರಿಜ್ ಸಮೀಕ್ಷೆ ಕೂಡ ಬಿಜೆಪಿ ನೇತೃತ್ವದ ಮಹಾಯುತಿಗೆ ಗೆಲುವು ಎಂದು ಹೇಳಿದೆ.

ಬಿಜೆಪಿ: 150-170

ಕಾಂಗ್ರೆಸ್: 110-130

ಇತರರು: 08-10

ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್:

ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಪ್ರಕಾರ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಗೆಲುವಿಗೆ ಸಜ್ಜಾಗಿದೆ.

ಮಹಾಯುತಿ: 182 (175-195)

ಮಹಾವಿಕಾಸ್ ಅಘಾಡಿ: 97 (85-112)

ಇತರೆ: 9 (7-12)

ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆ:

ಬಿಜೆಪಿ: 152-160

ಎಂವಿಎ: 130-138

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ಮಾಡಲಾಗಿದ್ದು, ನವೆಂಬರ್ 23 ರಂದು ಫಲಿತಾಂಶ ಹೊರಬೀಳಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಆದರೆ ಮಹಾ ವಿಕಾಸ್ ಅಘಾಡಿ (ಎಂವಿಎ) ಪ್ರಭಾವಶಾಲಿ ಪುನರಾಗಮನದ ನಿರೀಕ್ಷೆಯಲ್ಲಿದೆ. ಮಹಾರಾಷ್ಟ್ರದ ಎಲ್ಲಾ 288 ಸ್ಥಾನಗಳಿಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಿತು. ನವೆಂಬರ್ 23ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

WhatsApp Group Join Now
Telegram Group Join Now
Share This Article