Ad imageAd image

ಅ.1ರಂದು ಸಗುಣಾ ಚಂದಾವರಕರ ಸಂಸ್ಮರಣ ಗ್ರಂಥ ಬಿಡುಗಡೆ ಮತ್ತು ನಾದನಿನಾದ ಸಮಾರಂಭ

ratnakar
ಅ.1ರಂದು ಸಗುಣಾ ಚಂದಾವರಕರ ಸಂಸ್ಮರಣ ಗ್ರಂಥ ಬಿಡುಗಡೆ ಮತ್ತು ನಾದನಿನಾದ ಸಮಾರಂಭ
WhatsApp Group Join Now
Telegram Group Join Now

ಬಾಗಲಕೋಟೆ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಾಶ್ರೀ ಪ್ರಶಸ್ತಿ ಮತ್ತು ಬೆಂಗಳೂರು ಗಾನ ಪರಿಷತ್ ಹಾಗೂ ಕುಂದಗೋಳ ಸವಾಯಿ ಗಂಧರ್ವ ಕಮೀಟಿಯ ಪ್ರಶಸ್ತಿಗಳಿಗೆ ಭಾಜನರಾಗಿ ಧಾರವಾಡ- ಬೆಂಗಳೂರು ಆಕಾಶವಾಣಿ ಕೇಂದ್ರಗಳಲ್ಲಿ ಹಿಂದುಸ್ತಾನಿ ಸಂಗೀತ ಸೇವೆ ಸಲ್ಲಿಸಿದ ಕರ್ನಾಟಕ ಕಲಾಶ್ರೀ, ಗಾನ ಚತುರೆ ಸಗುಣಾ ಚಂದಾವರಕರ ಅವರ ಸಂಸ್ಮರಣ ಗ್ರಂಥ ಬಿಡುಗಡೆ ಮತ್ತು ನಾದನಿನಾದ ನುಡಿ ನಮನ ಸಮಾರಂಭವನ್ನು ಅ.1 ರಂದು ಬಿವ್ಹಿವ್ಹಿ ಸಂಘದ ನೂತನ ಸಭಾ ಭವನದಲ್ಲಿ ಬೆ.10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಿವ್ಹಿವ್ಹಿ ಸಂಘದ ಅಧ್ಯಕ್ಷರಾದ ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳು ವಹಿಸಲಿದ್ದು, ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ವೈದ್ಯರಾದ ಡಾ. ಹೆಚ್ ಎಫ್ ಯೋಗಪ್ಪನವರ ಪಾಲ್ಗೊಳ್ಳಲಿದ್ದು ಬಿವ್ಹಿವ್ಹಿ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಎನ್. ಅಥಣಿ ಹಾಗೂ ಶ್ರೀ ಗೋಪಾಲ ಕೃಷ್ಣದೇವ ಶ್ರೀ ಅವಡಿಮಠದ ಮಾಳಮುದ್ರಾಧಿಕಾರಿಗಳಾದ ನರೇಂದ್ರ ಉಭಯಕರ ಗೌರವ ಉಪಸ್ಥಿತರಿರಲಿದ್ದಾರೆ.

ಅಮೃತ ಮಾನವ ಸಂಪನ್ಮೂಲ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ ಪ್ರಕಾಶನದ ಸಂಸ್ಮರಣ ಗ್ರಂಥದ ಕುರಿತು ಸಗುಣ ಗಾನ ತರಂಗ ಪ್ರಧಾನ ಸಂಪಾದಕರಾದ ಡಾ. ಹರೀಶ ಹೆಗಡೆ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಹಿಂದುಸ್ಥಾನಿ ಗಾಯಕರಾದ ಧಾರವಾಡದ ಡಾ. ಪಂ ಕೈವಲ್ಯಕುಮಾರ ಗುರವ ನಾದ ಝೇಂಕಾರ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮಲ್ಲಿ ಎಸ್.ಎನ್ ವೈದ್ಯಕೀಯ ಮಹಾವಿದ್ಯಾಲಯದ ಓಬಿಜಿ ವಿಭಾಗದ ಮುಖ್ಯಸ್ಥರಾದ ಡಾ. ಆಶಾಲತಾ ಮಲ್ಲಾಪುರ ಹಾಗೂ ವಿದ್ಯಾ ಪ್ರಸಾರಕ ಮಂಡಳ ಕಾರ್ಯಾಧ್ಯಕ್ಷರಾದ ಶೀಲತಾ ಹೆರಂಜಲ ಉಪಸ್ಥಿತರಿರಲಿದ್ದಾರೆ. ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬಿವ್ಹಿವ್ಹಿ ಸಂಘದ ಉನ್ನತ ಶಿಕ್ಷಣ ಸಲಹೆಗಾರರಾದ ಡಾ. ಮೀನಾ ಆರ್. ಚಂದಾವರಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article