spot_img
spot_img
spot_img
spot_img
spot_img
spot_img
spot_img
spot_img
spot_img
26.1 C
Belagavi
Friday, September 22, 2023
spot_img

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಕ್ಷನ್ ಮಾಡದೆ ಸೈಟ್ ಹಂಚಿಕೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು

ಬೆಳಗಾವಿ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧಿಕಾರಿಗಳು ಆಕ್ಷನ್ ಮಾಡದೆ ಸೈಟ್ ಹಂಚಿಕೆ ಮಾಡಿದ್ದಾರೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಭ್ರಷ್ಟ ಅಧಿಕಾರಿ ಮೇಲೆ ಕ್ರಮ ಕೈಗೊಂಡಿರಲಿಲ್ಲ. ಅದರೆ ನ್ಯಾಯಾಲಯ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮೇಲೆ ಲೋಕಾಯುಕ್ತ ಎಫ್ ಐ ಆರ್ ದಾಖಲಿಸಲು ಸೂಚನೆ ನೀಡಿದೆ ಎಂದು ಆಮ್ ಆದ್ಮಿ ಮುಖಂಡ ರಾಜಕುಮಾರ ಟೋಪಣ್ಣವರ ಹೇಳಿದರು.

ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಕಳೆದ 2022 ಮಾ.18 ರಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಕ್ಷನ್ ಮಾಡದೆ ಸೈಟ್ ಹಂಚಿಕೆ ಮಾಡಿರುವ ಕುರಿತು ನಗರ ಪೊಲೀಸ್ ಇಲಾಖೆ, ಲೋಕಾಯುಕ್ತಕ್ಕೆ ದೂರು ನೀಡಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿರಲಿಲ್ಲ. ಆದರೆ ನ್ಯಾಯಾಲಯ ಲೋಕಾಯುಕ್ತಕ್ಕೆ ಬುಡಾ ಆಯುಕ್ತ ಪ್ರಿತಂ ನಸಲಾಪುರೆ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ ಎಂದರು.

ಲೋಕಾಯುಕ್ತಕ್ಕೆ ಕಳೆದ 9 ತಿಂಗಳ ಹಿಂದೆಯೇ ದೂರು ನೀಡಿದರೂ ಭ್ರಷ್ಟಾಚಾರ ನಡೆಸಿದ ಅಧಿಕಾರಿ ಮೇಲೆ ಎಫ್ ಐಆರ್ ದಾಖಲಿಸಿರಲಿಲ್ಲ. ಈಗ ನ್ಯಾಯಾಲಯದ ಆದೇಶ ನೀಡಿದೆ. ಇನ್ನಾದರೂ ಬೆಳಗಾವಿ ಲೋಕಾಯುಕ್ತ ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳ ರಕ್ಷಣೆ ಮಾಡುವ ಕೆಲಸ ಬಿಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಸರಕಾರಿ ಇಲಾಖೆಯ 50 ಲಕ್ಷ ರೂ. ಮೆಲ್ಪಟ್ಟ ಜಾಹೀರಾತುಗಳನ್ನು ಪ್ರಾದೇಶಿಕ ಪತ್ರಿಕೆಗಳಿಗೆ ನೀಡಲು ಬರುವುದಿಲ್ಲ. ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡಬೇಕು. ಅದು ವಾರ್ತಾ ಇಲಾಖೆಯಿಂದ ನೀಡಬೇಕು. ಆದರೆ ಬುಡಾ ಅಧಿಕಾರಿಗಳು  ಎಲ್ಲಾ  ಜಾಹೀರಾತು ನೀಡುವಾಗ ವಾರ್ತಾ ಇಲಾಖೆಯಿಂದ ನೀಡುತ್ತಾರೆ. ಆದರೆ ಬೆಳಗಾವಿ ಬುಡಾ ಅಧಿಕಾರಿಗಳು ನೇರವಾಗಿ ಪತ್ರಿಕೆಗೆ ಜಾಹೀರಾತು ನೀಡಿ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ, ಸರಕಾರದ ಕಣ್ಣಿಗೆ ಮಣ್ಣೇರಚ್ಚಿದ್ದಾರೆ ಎಂದು ಆರೋಪಿಸಿದರು.

ಸರಕಾರಿ ರಜೆ ಇದ್ದ ವೇಳೆ ಬುಡಾದ ಸೈಟ್ ಹಂಚಿಕೆ ಮಾಡಿದ್ದಾರೆ. ಈ ಕುರಿತು ವಿಡಿಯೋ ಗ್ರಾಫಿ ನೀಡಬೇಕೆಂದು ಕೇಳಿದಾಗ ಅವರು ವಿಡಿಯೋ ಕ್ರಿಯೆಟ್ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎಂದರು.

ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಯನ್ನು ಬುಡಾದ ಅಧಿಕಾರಿಗಳು ಲಕ್ಷಾಂತರ ರೂ.ಗೆ ಮಾರಾಟ ಮಾಡಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ. ಇದು ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮಾತ್ರ ಅಲ್ಲ  ಇದರಲ್ಲಿ ಭಾಗಿಯಾದ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

 

111 ಸೈಟ್ ಹಂಚಿಕೆಯ ವಿಡಿಯೋ ಗ್ರಾಫಿ  ಕನಿಷ್ಠ  1600  ನಿಮಿಷ ಆಗಬೇಕು. ಆದರೆ ಬುಡಾ ಅಧಿಕಾರಿಗಳು ವಿಡಿಯೋ ಗ್ರಾಫಿ ದಾಖಲೆ ನೀಡಿದ್ದು ಒಂದು ಗಂಟೆ ಏಳು ನಿಮಿಷದ ವಿಡಿಯೋ ನೀಡಿದ್ದಾರೆ.  111 ಸೈಟ್ ಹಂಚಿಕೆ ಮಾಡಿದ್ದು  ಆಕ್ಷಷನ್ ಪ್ರಕ್ರಿಯೆ ವಿಡಿಯೀ ಒಂದು ಗಂಟೆ ಏಳು ನಿಮಿಷದಲ್ಲಿ ಮಾಡಲು ಹೇಗೆ ಸಾಧ್ಯ. ಅಲ್ಲದೆ ವಿಡಿಯೋಗೆ ಆಡಿಯೋ ಇಲ್ಲ. ದಿನಾಂಕ ನಮೂದು ಆಗಿಲ್ಲ. ಈ ನೀಡಿರುವ ವಿಡಿಯೋ ಆಕ್ಷನ್ ಮಾಡಿದ್ದೋ ಅಥವಾ ಬೇರೆಯದ್ದೋ ಅದನ್ನು ತನಿಖೆ ಮಾಡಬೇಕೆಂದರು. ನ್ಯಾಯವಾದಿ ನಿತೀನ್ ಬೋಳಬಂದಿ, ಆಮ್ ಆದ್ಮಿ ಜಿಲ್ಲಾಧ್ಯಕ್ಷ ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related News

ಬೆಳಗಾವಿ ಜಿಲ್ಲೆಯಲ್ಲಿ 14 ಗ್ರಾ.ಪಂಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ

ಬೆಳಗಾವಿ : 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳಗಾವಿ ಜಿಲ್ಲೆಯ 14 ಗ್ರಾಮ ಪಂಚಾಯತಿಗಳು ಆಯ್ಕೆಯಾಗಿದ್ದು ಜಿಲ್ಲಾ ಪಂಚಾಯತ್ ಕಾರ್ಯಾಲಯ ಈ ಕುರಿತು ಆದೇಶ ನೀಡಿದೆ. ಖಾನಾಪುರ – ಬೇಕವಾಡ, ಕಿತ್ತೂರು –...

ಚಂದ್ರಯಾನ-3 ಮೇಲೆ ಇಸ್ರೋ ಕಣ್ಣು ಇಂದು ಎಚ್ಚೆತ್ತುಕ್ಕೊಳ್ಳುತ್ತಾ ಲ್ಯಾಂಡರ್ ಮತ್ತು ರೋವರ್

ಬೆಂಗಳೂರು: ಚಂದ್ರಯಾನ-3 ಅಭೂತಪೂರ್ವ ಯಶಸ್ಸಿನ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ ಮತ್ತು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -