ಬೆಳಗಾವಿ: ತಿಳಕ್ ವಾಡಿಯ ಕಾಲೇಜ್ ಪ್ರದೇಶಗಳಲ್ಲಿ ಗಾಂಜಾ, ಅಫೀಮ್, ಮಾದಕ ವಸ್ತುಗಳ ಮಾರಾಟ ವಾಗುತ್ತಿದ್ದು ಈ ಕಾಲೇಜ್ ಪ್ರದೇಶದಲ್ಲಿ ಇಂತಹ ಮಾದಕ ವಸ್ತುಗಳ ಮಾರಾಟ ಇಂದಿನ ಯುವಕರ ಭವಿಷ್ಯವನ್ನು ನಾಶ ಮಾಡಲಿದೆ ಮಾದಕ ವಸ್ತು ಗಳನ್ನು ಮಾರಾಟ ಮಾಡುವ ಗ್ಯಾಂಗ್ಗಳನ್ನು ಕೂಡಲೇ ಬಂಧಿಸಬೇಕೆಂದು ರಮಕಾಂತ್ ಕುಂಡಾಸ್ಕರ್ ಆಗ್ರಹಿಸಿದರು
ಮಂಗಳವಾರ ಶ್ರೀ ರಾಮ್ ಸೇನಾ ಹಿಂದುಸ್ತಾನ್ ಸಂಸ್ಥಾಪಕ ರಮಕಾಂತ್ ಕುಂಡಾಸ್ಕರ್ ಬೆಳಗಾವಿ ನಗರದ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಿ ತಿಲಕವಾಡಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮೂರು ಕೆ ಜಿ ಗಾಂಜಾ ಜಪ್ತ ಮಾಡಲಾಗಿದೆ ಆದರೆ ಇಲಾಖೆಯ ಕೆಲ ಅಧಿಕಾರಿಗಳು ಆರೋಪಿಗಳ ಜೊತೆ ಸೆಟಲ್ಮೆಂಟ್ ಮಾಡಿಕೊಂಡು ಆರೋಪಿಗಳನ್ನು ಬಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು .
ನಮ್ಮ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಕಮಿಷನರಿಗೆ ದೂರು ನೀಡಲಿದ್ದೇವೆ. ವಿಷಯದಂತೆ ದಕ್ಷಿಣ ಮತಕ್ಷೇತ್ರದಲ್ಲಿ ನಮ್ಮ ಸಂಘಟನೆಯ ಶ್ರೀರಾಮ ಸೇನಾ ಹಿಂದುಸ್ತಾನ್ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಸುಳ್ಳು ಆಪಾದನೆಗಳನ್ನು ಹೇರಿ ಮುಖದ್ಮೇ ಹಾಕಲಾಗುತ್ತಾ ಇದೆ ಆದ್ದರಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಶ್ರೀರಾಮ್ ಸೇನೆಯ ಹಿಂದುಸ್ತಾನ್ ಕಾರ್ಯಕರ್ತರು ಅಪರಾಧಿಗಳಲ್ಲ ಇವರು ಸಾಮಾಜಿಕ ಸೇವೆ ಮಾಡುವ ಕಾರ್ಯಕರ್ತರು ಶ್ರೀರಾಮ್ ಸೇನೆ ಹಿಂದುಸ್ತಾನ್ ತಮ್ಮ ಸಂಘಟನೆ ವತಿಯಿಂದ 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರಶ್ನಿಸಿದಾಗ ಈ ವಿಷಯದಲ್ಲಿ ನಾವು ಇನ್ನೂ ಚರ್ಚೆ ಮಾಡಬೇಕಾಗಿದೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜನವರಿ ಮೊದಲನೇ ವಾರದಲ್ಲಿ ನಡೆದಿರುವಂತಹ ಬೆಳಗಾವಿಯಲ್ಲಿ ಗೋಲಿಬಾರ ವಿಷಯದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ ಇದು ಒಂದು ವ್ಯವಹಾರಿಕ ಕಲವಾಗಿದ್ದು ಇದಕ್ಕೆ ಜಾತಿಯ ಧರ್ಮದ ಹೆಸರಿನಲ್ಲಿ ನೋಡಬಾರದು ಶ್ರೀರಾಮ್ ಸೇನೆ ಅಧ್ಯಕ್ಷರು ಪ್ರಮೋದ್ ಮುತಾಲಿಕ್ ಅವರ ಹೇಳಿಕೆ ಸಮಾಜ ಮೇಲೆ ಯಾವ ಪರಿಣಾಮ ಬೀರಲಿದೆ ಅನ್ನೋದು ಆತ್ಮಲೋಕನ ಮಾಡಿಕೊಳ್ಳಬೇಕೆಂದರು.
ವರದಿ: ರತ್ನಾಕರ ಗೌಂಡಿ
ಬೆಳಗಾವಿ