ಸರ್ಕಾರದ ಮಹತ್ವದ ಯೋಜನೆ ಒಂದಾದ ಗೃಹಜೋತಿ ಯೋಜನೆ, ಇಂದು ಬೆಳಗಾವಿ ಜಿಲ್ಲಾಡಳಿತ ಕುಮಾರ್ ಗಂಧರ್ವ ಸಭಾ ಭವನ ದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸತೀಶ್ ಜಾರಕಿಹೊಳಿ ಲೋಕಾರ್ಪಣೆ ಮಾಡಿದರು.
ಗೃಹ ಜೊತೆ ಯೋಜನೆ ರಾಜ್ಯಾದ್ಯಂತ ಎರಡು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳಿಗೆ ಈ ಯೋಜನೆಯ ಫಲಾನುಭವಿಗಳ ಅಗಲಿದ್ದಾರೆ. “ರಾಜ್ಯ ಸರ್ಕಾರ ಉಚಿತ ವಿದ್ಯುತ್ ಸುಸ್ಥಿರ ಬದುಕು” ಘೋಷವಾಕ್ಯದೊಂದಿಗೆ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಗೆ 10.6 ಲಕ್ಷ ಕುಟುಂಬಗಳಿಗೆ ಈ ಯೋಜನೆ ಸಿಗಲಿದೆ ಇಡೀ ರಾಜ್ಯದಲ್ಲಿ 81% ನೊಂದಣಿ ಬೆಳಗಾವಿ ಜಿಲ್ಲೆಯಲ್ಲಿ ಆಗಿದ್ದು ರಾಜ್ಯದಲ್ಲಿ ನೋಂದಣಿಯ ಪ್ರಕ್ರಿಯೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಒಟ್ಟು 814 ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅದರಲ್ಲಿ ಗ್ರಾಮ ಒನ, ನಾಡು ಕಚೇರಿ ,ಹಾಗೂ ಹೆಸ್ಕಾಂ ಕಚೇರಿಗಳಲ್ಲಿ ನೊಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿವೆ.
ಗೃಹ ಜ್ಯೋತಿ ಯೋಜನೆಯ ಲೋಕಾರ್ಪಣೆ ಮಾಡಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇತೃತ್ವದ ಸರ್ಕಾರ ಬಡವರ ಪರವಾಗಿ ನಿಂತಿರುವ ಸರ್ಕಾರ ಮೂರು ತಿಂಗಳಲ್ಲಿ ಮೂರು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ ಬೆಲೆ ಏರಿಕೆಯ ಇಂತಹ ಸಂದರ್ಭದಲ್ಲಿ ಈ ಗ್ಯಾರಂಟಿಗಳು ನಿಮ್ಮ ಕುಟುಂಬಗಳಿಗೆ ಅನುಕೂಲವಾಗಲಿದೆ ಹಾಗೂ ಇದನ್ನು ನೀವು ಸದುಪಯೋಗ ಪಡೆದುಕೊಳ್ಳಬೇಕೆಂದು ಫಲಾನವಿಗಳಿಗೆ ಕರೆ ಕೊಟ್ಟರು.
ಶಿಕ್ಷಣದ ಮಹತ್ವದ ಕುರಿತು ಪ್ರಸ್ತಾಪಿಸಿದ ಸಚಿವ ಈ ಯೋಜನೆಗಳಿಂದಾಗಿ ಮಕ್ಕಳ ಶಿಕ್ಷಣ ಹಾಗೂ ಅವರ ಭವಿಷ್ಯ ನಿರ್ಮಾಣಕ್ಕಾಗಿ ಕುಂಚಿತ ಸಹಾಯವಾಗಲಿದೆ.
ಎಂದು ಅಭಿಪ್ರಾಯಪಟ್ಟರು ವಿರೋಧಿಗಳು ಯೋಜನೆಗಳನ್ನು ಅನುಷ್ಠಾನ ಮಾಡಲು ವಿರೋಧಿಸಿದರು ಕೂಡ ಇದನ್ನು ಸಿದ್ದರಾಮಯ್ಯನವರ ಅನುಷ್ಠಾನ ಮಾಡಿದಾರೆ ಎಂದು ವಿರೋಧಿಗಳಿಗೆ ಪರೋಕ್ಷವಾಗಿ ಟೀಕಿಸಿದರು .
ಸಭೆಯ ಅಧ್ಯಕ್ಷತೆಯ ವಹಿಸಿದ್ದ ಆಸಿಫ್ ರಾಜು ಸೇಟ ಅವರು ಮಾತನಾಡಿ ಗ್ರಹ ಜ್ಯೋತಿ ಯೋಜನೆ ಮಾನ್ಯ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಕರ್ನಾಟಕದ ಉಸ್ತುವಾರಿ ವಹಿಸಿರುವಂತಹ ಸುರಜೆವಾಲ ಬೆಳಗಾವಿಯಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದರು. ಈಗ ಇದು ರಾಜ್ಯಾದ್ಯಂತವಾಗಿ ಯೋಜನೆ ಅನುಷ್ಠಾನವಾಗಿದೆ ಆದ್ದರಿಂದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದರು.
ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಶಾಸಕ ನಿಖಿಲ್ ಕತ್ತಿ ವಿಧಾನ ಪರಿಷತ್ ಸದಸ್ಯಚೆನ್ನರಾಜ್ ಹಟ್ಟಿಹೊಳಿ ನಿತೀಶ್ ಕೆ ಪಾಟೀಲ್ ಜಿಲ್ಲಾಧಿಕಾರಿಗಳು ಬೆಳಗಾವಿ ಹರ್ಷಲ್ ಬೋಯರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಬೆಳಗಾವಿ ಅಶೋಕ್ ದುಡಗುಂಟಿ ಆಯುಕ್ತರು ಮಹಾನಗರ ಪಾಲಿಕೆ ಮಹಾನಗರ ಪಾಲಿಕೆ ಸದಸ್ಯರುಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮತ್ತು ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು