Ad imageAd image

ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ –‌ ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ

ratnakar
ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ –‌ ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ
WhatsApp Group Join Now
Telegram Group Join Now
ಬೆಂಗಳೂರು: ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ  ಹೈಕೋರ್ಟ್‌ನಲ್ಲಿ ಒಂದು ವಾರಗಳ ಬಳಿಕ ಮಧ್ಯಂತರ ರಿಲೀಫ್‌ ಸಿಕ್ಕಿದೆ.

ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ 2ನೇ ಬಾರಿಗೆ ಮುಂದೂಡಿಕೆಯಾಗಿದೆ. ಗಣೇಶ ಹಬ್ಬದ ಬಳಿಕ ಸೆಪ್ಟೆಂಬರ್‌ 9 ರಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್‌ ವಿಚಾರಣೆ ನಡೆಸಲಿದೆ.+

ವಿಚಾರಣೆ ಆರಂಭವಾಗುತ್ತಿದ್ದಂತೆ, ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲಯ ರಾಘವನ್ ವಾದ ಮಂಡನೆ ಮಾಡಿದರು. ಆರಂಭದಲ್ಲೇ ಜಡ್ಜ್‌ ಈಗಾಗಲೇ ಮಣೀಂದರ್ ಸಿಂಗ್ ವಾದ ಮಂಡಿಸಿದ್ದಾರೆ, ಕನ್ನಡದಲ್ಲಿ ಇರುವ ಮಾಹಿತಿ ಏನಾದ್ರೂ ಇದ್ರೆ ಹೇಳಿ ಎಂದು ಕೇಳಿದರು.

ನಂತರ ವಾದ ಆರಂಭಿಸಿದ ರಾಘವನ್‌, ನಾನು ಮೂರು ವಿಷಯಗಳ ಮೇಲೆ ವಾದ ಮಂಡನೆ ಮಾಡ್ತಾ ಇದ್ದೀನಿ, 17ಎ ಅನ್ವಯ ಪ್ರಾಸಿಕ್ಯೂಷನ್ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯ. ನನ್ನ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕಷ್ಟು ಸತ್ಯಾಂಶಗಳು ಇದ್ದಾವೆ. ಇದನ್ನ ಕೋರ್ಟ್‌ ಗಮನಕ್ಕೆ ತರುತ್ತಾ ಇದ್ದೇನೆ ಎಂದು ವಾದ ಆರಂಭಿಸಿದರು. ಈ ವೇಳೆ ಹಲವು ಅಂಶಗಳನ್ನು ಕೋರ್ಟ್‌ ಗಮನಕ್ಕೆ ತಂದರು.

ನಾವು ಈಗ ಮಾಡುತ್ತಿರುವ ಆರೋಪಗಳೆಲ್ಲವೂ ತನಿಖೆ ಬಳಿಕ ಕ್ಲೀನ್‌ ಚಿಟ್‌ ಆಗಬಹುದು. ಯಾವುದೇ ಆರೋಪ ಹೊರಗೆ ಬರದೇ ಇರಬಹುದು. ತನಿಖೆಯೇ ನಡೆಯದೇ ಕ್ಲೀನ್ ಅಂತ ಹೇಳೋಕೆ ಆಗೋದಿಲ್ಲ. ಈ ಹಂತದಲ್ಲಿಯೇ ಕ್ಲೀನ್ ಅನ್ನಬಾರದು. ತನಿಖೆ ನಡೆದರೆ ಸತ್ಯಾಂಶ ಬರಲಿದೆ. ಸಿದ್ದರಾಮಯ್ಯ ಅವರು 1996 ರಿಂದ 1999ರ ವರೆಗೂ ಉಪ ಮುಖ್ಯಮಂತ್ರಿ, 2004 ರಿಂದ 2005ರ ವರೆಗೂ ಉಪಮುಖ್ಯಮಂತ್ರಿ, 2013 ರಿಂದ 2018ರ ವರೆಗೆ ಮುಖ್ಯಮಂತ್ರಿ ಹಾಗೂ 2023 ರಿಂದ ಈಗ ಮತ್ತೆ ಮುಖ್ಯಮಂತ್ರಿ. ಮಲ್ಲಯ್ಯ ಮತ್ತು ದೇವರಾಜು ಸಹೋದರರು, ಮೈಲಾರಾಯ್ಯಗೆ ಕೆಸರೆ ಭೂಮಿಯ ಎಲ್ಲಾ ಅಧಿಕಾರ ಇತ್ತು. ದೇವರಾಜುಗೆ ಯಾವುದೇ ಅಧಿಕಾರ ಇರೋದಿಲ್ಲ. ನಿಂಗ ಎಂಬುವವರಿಗೆ ಜಮೀನು ಗ್ರಾಂಟ್ ಸಿಕ್ಕಿತ್ತು. ಮೈಲಾರಯ್ಯ ಅವರಿಗೆ ದೇವರಾಜ ಮತ್ತು ಅವರ ಸಹೋದರ ಜಾಮೀನನ್ನು ಮಾರಾಟ ಮಾಡಿದ್ದರು. ಇದರಲ್ಲಿ ಹಕ್ಕು ಖುಲಾಸೆಯೂ ಆಗಿದೆ. ದೇವರಾಜು ಮೈಲಾರಯ್ಯಗೆ ಡಿನೋಟಿಫೈ ಆಗುವ ಮುನ್ನ ಮಾರಾಟ ಮಾಡಿದ್ದಾರೆ. ಡಿನೋಟಿಫೈ ಆಗುವ ಮುನ್ನ ಮಾರಾಟ ಮಾಡಿರೋದ್ರಿಂದ ಅಧಿಕಾರ ಖುಲಾಸೆ ಆಗಿದೆ ಎಂದು ವಾದಿಸಿದರು.

WhatsApp Group Join Now
Telegram Group Join Now
Share This Article