Ad imageAd image

ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ – ದಾಸನಿಗಾಗಿ ರೂಟ್‌ ಮ್ಯಾಪ್‌ ಚೇಂಜ್‌?

ratnakar
ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ – ದಾಸನಿಗಾಗಿ ರೂಟ್‌ ಮ್ಯಾಪ್‌ ಚೇಂಜ್‌?
WhatsApp Group Join Now
Telegram Group Join Now
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಹಾಗೂ ಗ್ಯಾಂಗ್‌ ಸದಸ್ಯರನ್ನು ಪರಪ್ಪನ ಅಗ್ರಹಾರದಿಂದ ಬೆಳಗ್ಗೆ 4 ಗಂಟೆಯಿಂದ ಬೇರೆ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.

ಬುಧವಾರ ಶಿರಾ ಮಾರ್ಗವಾಗಿ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು ಆದರೆ ಇಂದು ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಕರೆ ತರಲಾಗುತ್ತಿದೆ.

ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ತೆರಳುತ್ತಿದ್ದಾರೆ. ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಮೇಕ್ರಿ ವೃತ್ತ, ಹೆಬ್ಬಾಳ ರಸ್ತೆ, ಯಲಹಂಕ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬಳ್ಳಾರಿಯತ್ತ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಯಿತು.‌

ಬೆಳಗ್ಗೆ 6:40ಕ್ಕೆ ಬಾಗೇಪಲ್ಲಿ ತಾಲ್ಲೂಕಿನ ನಾರೇಪಲ್ಲಿ ಟೋಲ್ ಮೂಲಕ ಆಂಧ್ರಪ್ರದೇಶಕ್ಕೆ ದರ್ಶನ್‌ ಇದ್ದ ವಾಹನ ಎಂಟ್ರಿಯಾಗಿದೆ. ದರ್ಶನ್‌ ಇದ್ದ ವಾಹನದ ಕಿಟಕಿಗೆ ಪರದೆ ಹಾಕಲಾಗಿದೆ. ಅನಂತಪುರ, ಗುಂತಕಲ್, ಮಂತ್ರಾಲಯ ಮೂಲಕ ದರ್ಶನ್‌ ಅವರನ್ನು ಬಳ್ಳಾರಿಗೆ ಕರೆತರುವ ಸಾಧ್ಯತೆಯಿದೆ.

ಉಳಿದ ವಿಚಾರಣಾಧೀನ ಕೈದಿಗಳನ್ನು ಮೈಸೂರು, ಶಿವಮೊಗ್ಗ, ಧಾರವಾಡ,‌ ವಿಜಯಪುರ, ಕಲಬುರಗಿ, ಬೆಳಗಾವಿ ಕಾರಾಗೃಹಕ್ಕೆ‌ ಕರೆದುಕೊಂಡು ಹೋಗಲಾಗುತ್ತಿದೆ.

ಯಾವ ಜೈಲಿಗೆ ಯಾರು?
ನಟ ದರ್ಶನ್ – ಬಳ್ಳಾರಿ
ಜಗದೀಶ, ಲಕ್ಷ್ಮಣ್ – ಶಿವಮೊಗ್ಗ
ಧನರಾಜ್ – ಧಾರವಾಡ
ವಿನಯ್ – ವಿಜಯಪುರ
ನಾಗರಾಜ್- ಕಲಬುರಗಿ
ಪ್ರದೋಷ್ – ಬೆಳಗಾವಿ

WhatsApp Group Join Now
Telegram Group Join Now
Share This Article