ಬೆಳಗಾವಿ: ನಗರದ ಸರ್ಕಿಟ್ ಹೌಸ್ ನಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಳಗಾವಿ ಜಿಲ್ಲಾ ಸಮಿತಿ ಪತ್ರಿಕಾ ಪರಿಷತ್ ನಡೆಸಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮಾದಿಗ ಸಮಾಜಕ್ಕೆ ಖಾಲಿ ಇರುವ ಮೂರು ವಿಧಾನಪರಿಷತ್ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ನೀಡಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
2023ರ ಚುನಾವಣೆಯಲ್ಲಿ ಅತಿ ಹೆಚ್ಚು ಮಾದಿಗ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಮಾದಿಗ ಸಮಾಜ ಬಹುದೊಡ್ಡ ಪಾಲವಿದೆ ಮಾದಿಗ ಎಡ ಪಂಗಡಕ್ಕೆ ಸೇರಿದ ಮಾದಿಗ ಸಮಾಜವನ್ನು ರಾಜಕೀಯವಾಗಿ ಪ್ರತಿನಿತ್ಯ ನೀಡಲು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮುಂಚುನಿಯಲ್ಲಿದೆ.
ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಈವರೆಗೂ ಮಾದಿಗ ಸಮಾಜಕ್ಕೆ ಆರ್. ಬಿ .ತಿಮ್ಮಾಪುರ್, ಅವರನ್ನು ಹೊರತುಪಡಿಸಿದರೆ ಯಾವ ನಾಯಕರಿಗೂ ಈ ಸ್ಥಾನ ಒದಿಗೆ ಬಂದಿಲ್ಲ ಆದ್ದರಿಂದ ಪಕ್ಷ ಹಾಗೂ ಸರ್ಕಾರ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ನಮ್ಮ ಸಮಾಜಕ್ಕೆ ರಾಜಕೀಯ ಪ್ರತಿನಿತ್ಯ ನೀಡಬೇಕೆಂದು ಆಗ್ರಹಿಸಿದರು .
ಈ ಸ್ಥಾನ ನಮಗೆ ದೊರಕದೆ ಹೋದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಪರಿಣಾಮಎದುರಿಸ ಬೇಕಾಗುತ್ತದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷರಾದ ರಾಜೇಂದ್ರ ಐಹೊಳೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಎನ್ ಪ್ರಶಾಂತ್ ರಾವ್ ಬಸವರಾಜ್ ಅರಬಳ್ಳಿ ಉದಯ ರೆಡ್ಡಿ ಉಪಸ್ಥಿತರಿದ್ದರು