ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ದೀಪಕ್ ಗುಡಗನಟ್ಟಿ ಅವರು ಕರ್ನಾಟಕ ಸರ್ಕಾರಕ್ಕೆ ಬೆಳಗಾವಿಯೇ ಜಿಲ್ಲೆಗೆ ಹಾಗೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಫೆಬ್ರುವರಿ ತಿಂಗಳಿನಲ್ಲಿ ಬಜೆಟ್ ಅನ್ನು ಮಂಡಿಸಲಿದೆ ಈ ಬಜೆಟ್ ನಲ್ಲಿ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಪರವಾಗಿ ನಿಲ್ಲಬೇಕು ಬೆಳಗಾವಿಯಲ್ಲಿ ಅದ್ದೂರಿಯಿಂದ ಆಚರಿಸಲು ಪಡುತ್ತಿರುವ ಕರ್ನಾಟಕ ರಾಜ್ಯೋತ್ಸವ ಕ್ಕೆ ಹೆಚ್ಚಿನ ಅನುದಾನ ಹಾಗೂ ನಿಯಮಗಳನ್ನು ಸಡಿಲುಗೊಳಿಸಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.
ಅಲ್ಲದೆ ಸುವರ್ಣಸೌಧ ಕೆ ಬೆಂಗಳೂರಿನಲ್ಲಿರುವ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಸಬೇಕು ಹಾಗೂ ಬೆಳಗಾವಿ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಿಲ್ಲಬೇಕಾಗಿದೆ ಉತ್ತರ ಕರ್ನಾಟಕದ ರಾಜಕಾರಣಿಗಳ ಹಿತಾಸಕ್ತಿ ಇಲ್ಲದೇ ಇರುವುದ ಕಾರಣ ಯಾ ಮಟ್ಟಿನಲ್ಲಿ ಅಭಿವೃದ್ಧಿಯಾಗಬೇಕು ಆ ಮಟ್ಟಿನಲ್ಲಿ ಅಭಿವೃದ್ಧಿ ಆಗುತ್ತಾ ಇಲ್ಲ ನಾವು ಉದಾಹರಣೆಗಾಗಿ ನೋಡಬೇಕು ಇದ್ದಂತ ಬೆಳಗಾವಿ ವಿಮಾನಯಾನ ಸಂಪೂರ್ಣ ಸ್ಥಗಿತಗೊಳ್ಳುವ ಸ್ಥಿತಿಯಲ್ಲಿ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿರುವ ಉದ್ಯೋಗಗಳು ಬೇರೆ ಜಿಲ್ಲೆಗಳಿಗೆ ಸ್ಥಳಾಂತರವಾಗುತ್ತ ಇವೆ ಇಲ್ಲಿ ರಾಜಕಾರಣಿಗಳು ಯಾವುದೇ ಪ್ರತಿಭಟನೆ ಗೋಜಿಗೆ ಹೋಗುತ್ತಾ ಇಲ್ಲ ಆದ್ದರಿಂದ ಕರ್ನಾಟಕ ರಕ್ಷಣಾ ವೇದಿಕೆ ರಸ್ತೆಗೆ ಇಳಿಯಬೇಕಾಗಿ ಪರಿಸ್ಥಿತಿ ಬಂದಿದೆ ಕನ್ನಡ ನೆಲದ ಮಹಾಪುರುಷರುಗಳನ್ನು ಕಡೆಗಣಿಸುವುದು ಇದು ಕೂಡ ಈ ನೆಲಕ್ಕೆ ಮಾಡುವ ಅನ್ಯಾಯವಾಗಿದೆ ರಾಜಕಾರಣಿಗಳು ಇದೇ ರೀತಿ ಸುಮ್ಮನಿದ್ದರೆ ಕನ್ನಡಪರ ಸಂಘಟನೆಗಳು ಉಗ್ರವಾದ ಹೋರಾಟ ಮಾಡುತ್ತಾ ಮುಂಬರುವ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದೆಂದು ಮಾಧ್ಯಮದ ಜೊತೆ ಮಾತನಾಡುತ್ತಾ ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದರು