Ad imageAd image

ಜನಪದ ಗಾಯಕ ಮಾಳು ನಿಪನಾಳ ಗ್ಯಾಂಗ್‌ನಿಂದ ಹಲ್ಲೆ

ratnakar
ಜನಪದ ಗಾಯಕ ಮಾಳು ನಿಪನಾಳ ಗ್ಯಾಂಗ್‌ನಿಂದ ಹಲ್ಲೆ
WhatsApp Group Join Now
Telegram Group Join Now

ಬೆಳಗಾವಿ: ನೋಡಿಕೊಂಡು ಕಾರು ಚಲಾಯಿಸಿ ಎಂದಿದ್ದಕ್ಕೆ ಮೂವರ ಮೇಲೆ ನಾ ಡ್ರೈವರ್ (Na Driver) ಹಾಗೂ ಹಿತ್ತಲಕ್ಕೆ ಕರಿ ಬೇಡ ಮಾವ ಖ್ಯಾತಿಯ ಜನಪದ ಗಾಯಕ ಮಾಳು ನಿಪನಾಳ (Malu Nipanal) ಹಾಗೂ ಗ್ಯಾಂಗ್ ಸೇರಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಬಳಿ ನಡೆದಿದೆ.

ನಿಪನಾಳ ಗ್ರಾಮದ ಬಳಿ ಬೈಕ್ ಮೇಲೆ ತೆರಳುತ್ತಿದ್ದವರ ಮೇಲೆ ಹಲ್ಲೆ ಮಾಡಿದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿವೆ. ರ‍್ಯಾಶ್‌ ಡ್ರೈವಿಂಗ್ ಪ್ರಶ್ನಿಸಿದ್ದಕ್ಕೆ ಗಂಭೀರವಾಗಿ ಮಲ್ಲು ನಿಪನಾಳ ಗ್ಯಾಂಗ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಬಂದಿದೆ. ಶೇಖರ ಹಕ್ಯಾಗೋಳ, ಅಶ್ವಿನಿ ಈರಿಗಾರ, ರೂಪಾ ಹಕ್ಯಾಗೋಳ ಎಂಬುವರ ಮೇಲೆ ಹಲ್ಲೆ ಮಾಡಿದ್ದು ಹಲ್ಲೆಯಿಂದ ಶೇಖರ ಹಕ್ಯಾಗೋಳ ತಲೆಗೆ ಗಂಭೀರ ಗಾಯವಾದರೆ ಮಹಿಳೆಯ ಕೈಗೆ ಗಂಭೀರ ಗಾಯವಾಗಿದೆ.

ಕುಡಿದ ಅಮಲಿನಲ್ಲಿ 10 ಜನ ಸೇರಿ ಮಹಿಳೆ ಎನ್ನುವದನ್ನ ಲೆಕ್ಕಿಸದೇ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ. ಗಾಯಾಳುಗಳು ಚಿಕ್ಕೋಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದವರು ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದವರಾಗಿದ್ದು ಕೇರೂರು ಗ್ರಾಮದಿಂದ ಕಲ್ಲೋಳಿ ದೇವಸ್ಥಾನಕ್ಕೆ ಹೋಗುವಾಗ ನಿಪನಾಳ ಗ್ರಾಮದ ಬಳಿ ಘಟನೆ ನಡೆದಿದೆ.

ತನ್ನೂರಿನಲ್ಲೇ ಮಾಳು ಈ ರೀತಿ ಗೂಂಡಾವರ್ತನೆ ತೋರಿದ್ದನ್ನು ಸ್ಥಳೀಯರು ನೋಡಿದ್ದಾರೆ. ಹಲ್ಲೆ ಮಾಡಿ ಅಲ್ಲಿಂದ ಮಾಳು ಪರಾರಿಯಾದರೆ ಸ್ಥಳೀಯರು ಗಾಯಾಳುಗಳಿಗೆ ಕೂಡಲೇ ರಾಯಬಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಮೂವರು ಚಿಕ್ಕೋಡಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಬಂದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಗಾಯಾಳುಗಳಿಂದ ಮಾಹಿತಿ ಪಡೆಯುತ್ತಿರುವ ಪೊಲೀಸರು ಮಾಳು ವಿರುದ್ಧ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ. ಈ ರೀತಿ ಹಲ್ಲೆ ಮಾಡಿದ ಗಾಯಕ ಮಾಳು ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ಇದೆ. ಘಟನೆ ಕುರಿತು ಮಾಹಿತಿ ಪಡೆದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್‌ ಹೇಳಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

WhatsApp Group Join Now
Telegram Group Join Now
Share This Article