Ad imageAd image

2025ರಲ್ಲಿ ಜನಗಣತಿ ಆರಂಭ, 2028ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ!

ratnakar
2025ರಲ್ಲಿ ಜನಗಣತಿ ಆರಂಭ, 2028ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ!
WhatsApp Group Join Now
Telegram Group Join Now

ನವದೆಹಲಿ: ದೇಶದ ಜನ ಸಂಖ್ಯೆಯ ಅಧಿಕೃತ ಸಮೀಕ್ಷೆಯಾದ ಜನಗಣತಿಯನ್ನು (Census) ಸರ್ಕಾರ 2025ರಲ್ಲಿ ಆರಂಭಿಸುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ಪ್ರಕ್ರಿಯೆಯು 2025 ರಲ್ಲಿ ಆರಂಭಗೊಂಡು 2026 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ (Lok Sabha Delimitation Process) ಕೆಲಸ ಆರಂಭಗೊಂಡು 2028ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆ ಆಗಲಿದ್ದು ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್‌ (Covid 19) ಕಾರಣದಿಂದ ಮುಂದೂಡಿಕೆಯಾಗಿದೆ. ಲೋಕಸಭಾ ಪುನರ್‌ ವಿಂಗಡನೆಯೊಂದಿಗೆ ಮಹಿಳಾ ಮೀಸಲಾತಿ ಸಹ ಜಾರಿಗೆ ಬರಲಿದೆ.

 

WhatsApp Group Join Now
Telegram Group Join Now
Share This Article