ಮಂಡ್ಯ: ಎಂಪಿ ಚುನಾವಣೆ ಸಂಬಂಧ ನಾನು ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ. ಸರಿಯಾದ ಸಮಯ ಸಂದರ್ಭ ನೋಡಿ, ಎಲ್ಲವೂ ಅಂತಿಮವಾದಾಗ ಹೇಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಈಗ ನಾನು ಚುನಾವಣೆ ಸಂಬಂಧ ನಾನು ಮಾತಾಡಲ್ಲ. ಮಂಡ್ಯದಲ್ಲಿ ಚುನಾವಣೆ ನಿಲ್ಲಲ್ಲ, ನಿಲ್ಲುತ್ತೇನೆ ಎಂಬುದರ ಬಗೆಗೆ ಈಗಾಗಲೇ ಹಲವು ಬಾರಿ ಮಾತಾಡಿದ್ದೇನೆ. ಬಿಜೆಪಿ-ಜೆಡಿಎಎಸ್ ಮೈತ್ರಿಯಾದರೂ ಸೀಟು ಹಂಚಿಕೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಅಂತಿಮವಾಗದೆ ನಾನು ಮಾತಾಡುವುದು ಸರಿಯಲ್ಲ. ಮಂಡ್ಯದ ಜನ ನನ್ನ ಜೊತೆಗೆ ಇದ್ದಾರೆ. ಅಂಬರೀಶ್ ಅಭಿಮಾನಿಗಳು, ನನ್ನ ಫಾಲೋವರ್ಸ್ಗಳು ನನ್ನ ಜೊತೆ ಇದ್ದಾರೆ. ನಾನು ಯಾರ ಬಳಿಯೂ ಹೋಗಿ ಟಿಕೆಟ್ ಕೇಳಿಲ್ಲ. ಈಗಲೂ ಅಷ್ಟೇ ಯಾರನ್ನೂ ಕೇಳಲ್ಲ. ನಾನು ಎಂಪಿ ಸ್ಥಾನ ಇಲ್ಲದೇ ಇರುವಾಗಲೇ ಪಕ್ಷಗಳ ಆಫರ್ ನಾನು ಸ್ವೀಕರಿಸಿಲ್ಲ. ಸದ್ಯ ಎಂಪಿ ಆಗಿದ್ದೀನಿ. ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಲಿ? ರಾಜಕಾರಣಕ್ಕಾಗಿ ಇಲ್ಲಿಗೆ ಬಂದಿಲ್ಲ. ಮಂಡ್ಯದ ಜನರಿಗಾಗಿ ಇಲ್ಲಿಗೆ ಬಂದಿರುವುದು ಎಂದರು.
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಕಂಡುಬಂದಿದೆ.
ಕಾಂಗ್ರೆಸ್ನ ಮೂವರು ಸಂಸದರಿಗೆ ಜಯವಾಗಿದ್ದು, ಬಿಜೆಪಿಯ ಮೂವರು ಸಂಸದರಿಗೆ ಸೋಲಾಗಿದೆ. ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ನ ರೇವಂತ್ ರೆಡ್ಡಿ, ಉತ್ತಮ್ ಕುಮಾರ್ ರೆಡ್ಡಿ, ಕೊಮಟಿರೆಡ್ಡಿ...
ಉತ್ತರಕಾಶಿಯ ಸಿಲ್ಕ್ಯಾರ್ ಸುರಂಗದಲ್ಲಿ 17 ದಿನಗಳ ಕಾಲ 41 ಕಾರ್ಮಿಕರು ಸಿಲ್ಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತೆಗೆದಿರುವ ಬೆಳಗಾವಿಯ ಹೆಮ್ಮೆಯ L&D ಕಂಪನಿಯ ಉದ್ಯೋಗಿ ಬಾಲಚಂದ್ರ ಕಿಲಾರಿ ದುಡಪಿ ಕೇದಾರ,ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು...