ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳು ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಕ್ಟೋಬರ್ ಒಂದರಿಂದ ಶೆ. 10%ರಿಂದ 30%ವರೆಗೆ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿದೆ.
ಅದರ ಅಂಗವಾಗಿ ಬೆಳಗಾವಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೇಂದ್ರ ಸಂಸ್ಥಾನ ಸಹಾಯಕರಾದ ವಿ.ಎಸ.ಘೋರ್ಪಡೆ ಪಂಚಾಯತ್ ಸ್ವರಾಜ್ ಸಮಾಚಾರ ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ ಆಸ್ತಿಗಳ ಮಾರ್ಗಸೂಚಿ ಮತ್ತು ಬೆಲೆ ಪರಿಷ್ಕರಣೆ ಮಾಹಿತಿ ನೀಡಿದರು. 2018-19ರಿಂದ ಯಾವುದೇ ಬೆಲೆಯನ್ನು ಹೆಚ್ಚಳ ಮಾಡಲಾಗಿಲ್ಲ. ಈ ಸಲ ಸರ್ಕಾರ ಶೆ. 10% ರಿಂದ 30% ರವರೆಗೆ ಬೆಲೆ ಪರಿಷ್ಕರಣೆ ಮಾಡಲಾಗಿದೆ.
ಕೃಷಿ ಅಥವಾ ಕೃಷಿಯೇತ್ತರ ಜಮೀನುಗಳು, ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿಗಳು, ನಗರಸಭೆಗಳಲ್ಲಿ ಈ ಬೆಲೆ ಬೇರೆ ಬೇರೆಯಾಗಿರುತ್ತದೆ. ಕೃಷಿ ಮತ್ತು ಕೈಗಾರಿಕಾ ಜಮೀನುಗಳಲ್ಲಿ ಯಾವುದೇ ರೀತಿಯ ಬೆಲೆ ಪರಿಷ್ಕರಣೆ ಮಾಡಲಾಗಿಲ್ಲ. ಹೆಚ್ಚಿನ ಜನ ಸಮೂಹ ಮತ್ತು ನಗರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ನಗರ ಪ್ರದೇಶಗಳು ಮತ್ತು ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿರುವ ಜಮೀನುಗಳಿಗೆ ಹೆಚ್ಚುಬೆಲೆ ನಿಗದಿಪಡಿಸಲಾಗಿದೆ ಎಂದರು.
ಪಂಚಾಯಿತಿಗಳಲ್ಲಿ ನೀಡುತ್ತಿರುವ ಉತಾರಗಳು
ಆರ.ಡಿ. ಪಿ. ಆರ್ ಮತ್ತು ಕಾವೇರಿ ತಂತ್ರಾಂಶ ಎರಡು ಇಂಟ್ರೊಡಕ್ಷನ್ ಆಗಿರುವುದರಿಂದಾಗಿ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರ ಸ್ಥಿರ ಆಸ್ತಿಗಳ ದರ ಹೆಚ್ಚಳ ಮಾಡುವುದರಿಂದ ನೋಂದಣಿ ಮತ್ತು ಮುದ್ರಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಸಪ್ಟೆಂಬರ್ 30 ರಂದು ಸಾಯಂಕಾಲದವರೆಗೆ ಗೆಜೆಟ್ ಹೊರಡಿಸಲಾಗುವುದು ಬೆಳಗಾವಿ ಅತಿ ದೊಡ್ಡ ಜಿಲ್ಲೆ ಆಗಿರುವುದರಿಂದ ಇಲ್ಲಿ 17 ನೊಂದಣಿ ಕಚೇರಿಗಳು ಇದ್ದು ಈಗಾಗಲೇ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಇನ್ನು ಕೆಲವೊಂದು ಮಾಹಿತಿಗಳು ಬರಬೇಕಾಗಿದೆ ಎಂದರು.
ವರದಿ: ರತ್ನಾಕರ ಗೌಂಡಿ ಬೆಳಗಾವಿ